ಒಮ್ಮೆ ಪುರಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ ಇಂದ್ರದ್ಯುಮ್ನ ಎಂಬ ರಾಜನು
ನೀರಿನಲ್ಲಿ ತೇಲಿಬಂದ ಅಂಜೂರ ಹಣ್ಣಿನ ಮರದ ದಿಮ್ಮಿಯನ್ನು ನೋಡುತ್ತಾನೆ.
ಆದೇ ದಿನ ರಾತ್ರಿ ಸ್ವತಃ ಶ್ರೀ_ವಿಷ್ಣುವೇ ಅವನ ಕನಸಿನಲ್ಲಿ ಬಂದು *ಆ ಮರದಲ್ಲಿ ತನ್ನ ವಿಗ್ರಹವನ್ನು ಮಾಡಿ ಪ್ರತಿಸ್ಥಾಪಿಸು* ವಂತೆ ಆದೇಶಿಸುತ್ತಾನೆ.
ಅಜ್ಞಾನುಸಾರ ರಾಜ ಆ ಸಮಯದಲ್ಲಿ ಇದ್ದಂತಹ ಪ್ರಖ್ಯಾತ ಶಿಲ್ಪಿಗಳನ್ನು ಕರೆಸುತ್ತಾನೆ.
ಆದರೆ ಅಂಜೂರದ ಮರದಿಂದ ವಿಗ್ರಹವನ್ನು ನಿರ್ಮಿಸಲು ಸಾಧ್ಯವಿಲ್ಲ
ಇದು ನಮ್ಮಿಂದಾಗದ ಕೆಲಸ ಎಂದು ಬಂದಂತಹ ಶಿಲ್ಪಿಗಳು ಹೇಳುತ್ತಾರೆ.
ಚಿಂತಾಕ್ರಾಂತನಾದ ಇಂದ್ರದ್ಯುಮ್ನನ ಎದುರು ವಿಷ್ಣುವಿನ ಕೋರಿಕೆಯಂತೆ ಓರ್ವ ವೃದ್ಧನ ವೇಷದಲ್ಲಿ ಬಂದ ದೇವಶಿಲ್ಪಿ
ಶ್ರೀ ವಿರಾಟ್ ವಿಶ್ವಕರ್ಮ,
ಕೆಲವು ಷರತ್ತುಗಳನ್ನು ಮುಂದಿಟ್ಟು ವಿಗ್ರಹ ನಿರ್ಮಿಸಿಕೊಡುವುದಾಗಿ ಹೇಳುತ್ತಾನೆ.
ಷರತ್ತುಗಳು:
*ಹೇಳಿದ ಅವಧಿಯೊಳಗೆ ನಿರ್ಮಾಣ ಕಾರ್ಯ ಮುಗಿಸಿ ತಾನೇ ಹೊರ ಬರುವವರೆಗೂ ದೇವಸ್ಥಾನದ ಬಾಗಿಲು ಮುಚ್ಚಿರಬೇಕು.*
*ಹೇಳಿದ ಅವಧಿ ಮುಗಿಯುವುದರೊಳಗೆ ಯಾರೂ ಸಹ ತಾವಿರುವ ದೇವಸ್ಥಾನದ ಬಾಗಿಲನ್ನು ತೆರೆಯಕೂಡದು.*
*ಒಂದೊಮ್ಮೆ ಬಾಗಿಲನ್ನು ತೆರೆಯುವ ಕಾರ್ಯಕ್ಕೆ ಯಾರಾದರೂ ಪ್ರಯತ್ನ ಪಟ್ಟರೆ ನಿರ್ಮಾಣ ಕಾರ್ಯ ನಿಲ್ಲಿಸಲಾಗುವುದು.*
ಷರತ್ತುಗಳಿಗೆ ಒಪ್ಪಿದ ರಾಜ.
ದೇವಳದ ಬಾಗಿಲನ್ನು ಮುಚ್ಚಿ ವಿಗ್ರಹ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿಕೊಡಲಾಯಿತು…
ದಿನಗಳು ಉರುಳಿದವು,
ಇಂದ್ರದ್ಯುಮ್ನ ಮತ್ತು ಅವನ ರಾಣಿಗೆ
*ದೇವಸ್ಥಾನದ ಬಳಿ ಯಾವುದೇ ಶಬ್ದ ಕೇಳಿ ಬರುತ್ತಿಲ್ಲ* ಎನ್ನುವ ಕಳವಳ ಪ್ರಾರಂಭವಾಯಿತು.
ಪ್ರಸಿದ್ಧ ಶಿಲ್ಪಿಗಳೆಲ್ಲರೂ ತಮ್ಮಿಂದಾಗದ ಕೆಲಸ ಎಂದು ಕೈ ಚೆಲ್ಲಿದಾಗ,
ಓರ್ವ ವೃದ್ಧ ತಾವಾಗಿಯೇ ಬಂದು ಅಂಜೂರದ ಹಣ್ಣಿನ ಮರದಲ್ಲಿ ವಿಗ್ರಹ ನಿರ್ಮಿಸುವುದಾಗಿ ಹೇಳಿ ಒಳಗೆ ಹೋಗಿದ್ದಾರೆಂದರೆ
ಅವರು ಸಾಮಾನ್ಯ ವ್ಯಕ್ತಿಯಂತೂ ಆಗಿರಲು ಸಾಧ್ಯವಿಲ್ಲ ಎನ್ನುವ ಕೂತುಹಲ ಒಂದು ಕಡೆಯಾದರೆ,
ನಿರ್ಮಾಣಕ್ಕೆ ಯೋಗ್ಯವಲ್ಲದ ಮರದಿಂದ ಸುಂದರವಾದ ವಿಗ್ರಹವನ್ನು ಹೇಗೆ ನಿರ್ಮಿಸುತ್ತಿರಬಹುದು ಎನ್ನುವ ಕೂತುಹಲ ಇನ್ನೊಂದು ಕಡೆ…
ಅವಧಿಗೂ ಮುನ್ನ
ಒಂದು ದಿನ ರಾಣಿಯ ತಡೆಯಲಾಗದ ಕೂತುಹಲಮತ್ತು ನಿರೀಕ್ಷೆಗಳಿಂದ ದೇವಸ್ಥಾನದ ಬಾಗಿಲನ್ನು ತೆರೆದೇ ಬಿಡುತ್ತಾಳೆ.
ಅಪೂರ್ಣ ವಿಗ್ರಹದ ಎದುರೇ ನಿಂತಿದ್ದ ವೃದ್ಧ ವೇಷದಲ್ಲಿದ್ದ ದೇವಶಿಲ್ಪಿಯು ಕ್ಷಣ ಮಾತ್ರದಲ್ಲಿ ಮಾಯವಾಗಿ ಬಿಡುತ್ತಾನೆ…!!!.
ರಾಣಿಯ ಈ ನಡೆಯಿಂದ ವಿಚಲಿತನಾದ
ರಾಜಾ ಇಂದ್ರದ್ಯುಮ್ನ ಮತ್ತೊಮ್ಮೆ ವಿಷ್ಣುವಿನ ಮೊರೆ ಹೋಗುತ್ತಾನೆ…
ಆ ದಿನ ರಾತ್ರಿ, ರಾಜನ ಕನಸಿನಲ್ಲಿ ಬಂದ ವಿಷ್ಣು,
*ಇದು ನನ್ನ ವಿರಾಟ್ ರೂಪ ಈಗ ಇರುವಂತೆಯೇ ವಿಗ್ರಹವನ್ನು ಪ್ರತಿಷ್ಠಾಪಿಸು* ಎಂದು ಹೇಳುತ್ತಾನೆ…!!!.
ರಾಜ ಶ್ರಿ ವಿಷ್ಣುವಿನ ಅಣತಿಯಂತೆಯೇ ವಿಗ್ರಹವನ್ನು ಪುರಿಯಲ್ಲಿ ಪ್ರತಿಷ್ಠಾಪಿಸುತ್ತಾನೆ.
ಆ ವಿಗ್ರಹದ ರೂಪವೇ ನಾವಿಂದು ನೋಡುತ್ತಿರುವ *ಪುರಿ ಜಗನ್ನಾಥ.*
_*ಓಂ ನಮೋ ಭಗವತೇ ಜಗನ್ನಾಥಾಯ.*_
🙏🙏