Live Stream

[ytplayer id=’22727′]

| Latest Version 8.0.1 |

Cultural

‘ಕುವೆಂಪು ವಿಚಾರ ಕ್ರಾಂತಿ’ ಪುಸ್ತಕ ಜನಾರ್ಪಣೆ

‘ಕುವೆಂಪು ವಿಚಾರ ಕ್ರಾಂತಿ’ ಪುಸ್ತಕ ಜನಾರ್ಪಣೆ

ರಾಷ್ಟಕವಿ ಕುವೆಂಪು ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದ್ದು ಅವುಗಳ ಕೇಂದ್ರ ಪ್ರಜ್ಞೆಯನ್ನು ಪ್ರಸಾರ ಮಾಡುವ ಅಗತ್ಯವಿದೆ. ಕುವೆಂಪು ಅವರು ಅಂದಿನ ದಿನಗಳಲ್ಲೇ ಪ್ರತಿಪಾದಿಸಿದ ಸಮಾನತೆ, ಸಾಮಾಜಿಕ ನ್ಯಾಯಪರತೆ, ಒಕ್ಕೂಟ ಪದ್ಧತಿ ಪರವಾದ ಚಿಂತನಶೀಲತೆ, ಜಾತಿ ಮತ್ತು ಧರ್ಮ ತಾರತಮ್ಯ ವಿರೋಧಿ ವೈಚಾರಿಕತೆ, ಮೂಢನಂಬಿಕೆ ವಿರೋಧಿ ವೈಜ್ಞಾನಿಕತೆಯೇ ಮುಂತಾದ ಬರಹಗಳು ಇಂದಿನ ಸನ್ನಿವೇಶದಲ್ಲಿ ಜನರಿಗೆ ತಲುಪಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪನವರು ಕುವೆಂಪು ಅವರ ಕೆಲವು ಆಯ್ದ ಲೇಖನಗಳು ಮತ್ತು ಲೇಖನಗಳ ಆಯ್ದ ಭಾಗಗಳನ್ನು ಸಂಕಲಿಸಿ ‘ಕುವೆಂಪು ವಿಚಾರ ಕ್ರಾಂತಿ’ ಎಂಬ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ.
ಈ ‘ಕುವೆಂಪು ವಿಚಾರ ಕ್ರಾಂತಿ’ ಕೃತಿಯನ್ನು ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯ ಅವರು ಜುಲೈ,5ರಂದು ಶನಿವಾರ ಸಾಯಂಕಾಲ 5:00 ಗಂಟೆಗೆ ಜನಾರ್ಪಣೆ ಮಾಡಲಿದ್ದಾರೆ. ಈ ಜನಾರ್ಪಣೆ ಕಾರ್ಯಕ್ರಮವು ಓಉಔ, ಸಭಾಂಗಣ, ಸರ್ಕಾರಿ ನೌಕರರ ಸಂಘ, ಕಬ್ಬನ್ ಪಾರ್ಕ್, ಬೆಂಗಳೂರಿನಲ್ಲಿ ನಡೆಯಲಿದ್ದು, ನಾಡೋಜಾ ಡಾ. ಹಂ. ಪ. ನಾಗರಾಜಯ್ಯ, ಜಸ್ಟಿಸ್ ನಾಗಮೋಹನದಾಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಕುವೆಂಪು ಅವರ ಪುತ್ರಿ ಶ್ರೀಮತಿ ತಾರಿಣಿ ಚಿದಾನಂದಗೌಡ, ಅಳಿಯ ಡಾ. ಚಿದಾನಂದಗೌಡ ಮತ್ತು ಲೇಖಕ ಬರಗೂರು ರಾಮಚಂದ್ರಪ್ಪ ಉಪಸ್ಥಿತರಿರುತ್ತಾರೆ. ಸಭಾ ಕಾರ್ಯಕ್ರಮಕ್ಕೆ ಮುಂಚೆ 4 ಗಂಟೆಗೆ ಡಾ. ಶಮಿತಾ ಮಲ್ನಾಡ್ ತಂಡದಿ0ದ ಕುವೆಂಪು ಗೀತೆ ಗಾಯನವಿದೆ.

ಕಾರ್ಯಕ್ರಮದ ವಿವರ
ದಿನಾಂಕ : ಜುಲೈ 05, 2025 ಶನಿವಾರ
ಸಮಯ : ಸಂಜೆ 5ಗಂಟೆ
ಸ್ಥಳ : NGO ಸಭಾಂಗಣ, ಸರ್ಕಾರಿ ನೌಕರರ ಸಂಘ, ಕಬ್ಬನ್ ಪಾರ್ಕ್, ಬೆಂಗಳೂರು
ಸ0ಪರ್ಕಕ್ಕಾಗಿ : 7483950580, 9448324727

 

TODAY’S NEWS HEADLINES

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";