Live Stream

[ytplayer id=’22727′]

| Latest Version 8.0.1 |

State News

ಅವ್ರ ಶ್ರಮಕ್ಕೆ ಫಲ ಸಿಗುತ್ತೆ: ಡಿಕೆ ಸುರೇಶ್‌

ಅವ್ರ ಶ್ರಮಕ್ಕೆ ಫಲ ಸಿಗುತ್ತೆ: ಡಿಕೆ ಸುರೇಶ್‌

ಬೆಂಗಳೂರು: ಡಿಕೆ ಶಿವಕುಮಾರ್‌ ಅವರು ಸಿಎಂ ಆಗಬೇಕೆಂಬ ಆಸೆ ನನಗೂ ಇದೆ. ನಮಗೆ ಈಗಲೂ ಭರವಸೆ ಇದೆ, ನಾಳೆಯೂ ಇರಲಿದೆ. ಎಂದಾದರೂ ಒಂದು ದಿನ ಡಿ.ಕೆ ಶಿವಕುಮಾರ್ ಶ್ರಮಕ್ಕೆ ಫಲ ಸಿಗುತ್ತೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್‌  ಹೇಳಿದರು.

ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻಐ ಹ್ಯಾವ್ ನೋ ಅದರ್ ಆಪ್ಷನ್ʼ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದರು,

ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ (Congress Party) ಒಬ್ಬ ಶಿಸ್ತಿನ ಸಿಪಾಯಿ. ಇದನ್ನ ಹಿಂದೆಯೂ ಹೇಳಿದ್ದಾರೆ, ಈಗಲೂ ಹೇಳಿದ್ದಾರೆ.. ಮುಂದೆಯೂ ಹೇಳುತ್ತಾರೆ. ಪಕ್ಷದ ಶಿಸ್ತನ್ನ ಪಾಲಿಸಿದ್ದಾರೆ, ನಮಗೆ ಈಗಲೂ ಭರವಸೆ ಇದೆ, ನಾಳೆಯೂ ಇರಲಿದೆ. ಎಂದಾದರೂ ಒಂದು ದಿನ ಡಿ.ಕೆ ಶಿವಕುಮಾರ್ ಶ್ರಮಕ್ಕೆ ಫಲ ಸಿಗುತ್ತೆ. ಡಿ.ಕೆ ಶಿವಕುಮಾರ್ ರದ್ದು ಅಸಹಾಯಕತೆ ಅಲ್ಲ. ಪಕ್ಷಕ್ಕೆ ಗೌರವ ಕೊಡೋದು, ನಾಯಕತ್ವಕ್ಕೆ ಗೌರವ ಕೊಡೋದು. ಪಕ್ಷದ ಅಧ್ಯಕ್ಷರಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ನನಗೂ ಅವರು ಸಿಎಂ ಆಗಬೇಕು ಎಂಬ ಆಸೆ ಇದೆ. ಯಾವಾಗ ಏನು ಎಂಬುದನ್ನ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದರು.

ವೀ ಕೇ ನ್ಯೂಸ್
";