ಪ್ರಖರ ಗಾಂಧೀ ಚಿಂತಕರೂ, ಶಿಕ್ಷಣ ವೇತ್ತರೂ ಆಗಿರುವ ಎಲ್. ನರಸಿಂಹಯ್ಯ ತೊಂಡೋಟಿ ಅವರು ಮಂಡ್ಯದ ಗಾಂಧೀ ಭವನ ನೀಡಲಿರುವ ಈ ಸಾಲಿನ ಪ್ರೊ.ಎಂ.ಕರೀ ಮುದ್ದೀನ್ ಸ್ಮಾರಕ ಗಾಂಧೀ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇತ್ತೀಚೆಗೆ ತಮ್ಮ 91 ನೆ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಎಲ್ಲೆನ್ ಅವರು ಕನಕಪುರ ತಾಲ್ಲೂಕು ಹಾರೋಹಳ್ಳಿ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳಕಾಲ ಮುಖ್ಯೋಪಾಧ್ಯಾಯರಾಗಿ ಆ ಶಾಲೆಗೆ ಗಾಂಧೀ ಮೌಲ್ಯಗಳ ಚೌಕಟ್ಟು ಹಾಕಿದವರು.
ವಿವಿಧ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತುಮಕೂರು. ಮತ್ತು ರಾಮನಗರ ಜಿಲ್ಲೆಗಳ ಶಾಲಾ ಮಕ್ಕಳಿಗೆ ಗಾಂಧೀ ತತ್ವಗಳನ್ನು ಪರಿಚಯಿಸಿದವರು. ಅವರು ರಚಿಸಿದ ಕಥನ ಕವನ ‘ಗಾಂಧೀ ಗೋವಿನ ಕಥೆ ‘
ಮಕ್ಕಳಿಗೆ ಪ್ರಿಯವಾದ ಪುಸ್ತಿಕೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀಯುತರಿಗೆ 2022 ರ ಎ. ಆರ್. ನಾರಾಯಣ ಘಟ್ಟ – ಸರೋಜಮ್ಮ ಗಾಂಧೀ ಪುದು ವಟ್ಟು ದತ್ತಿ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರೊ. ಎಂ. ಕರೀಮುದ್ದಿನ್ : ಶ್ರೀರಂಗಪಟ್ಟಣ ತಾಲ್ಲೂಕು ಗಂಜಾಂ ನಿವಾಸಿಯಾಗಿದ್ದ ದಿ. ಪ್ರೊ.ಎಂ. ಕರೀಮುದ್ದೀನ್ ಕನ್ನಡ ಪ್ರಾಧ್ಯಾಪಕರೂ,ಭಾಷಾ ತಜ್ಞರೂ, ವಾಗ್ಮಿಗಳೂ ,ಬರಹಗಾರರೂ ಆಗಿ ಪ್ರಸಿದ್ಧರು.ಕನ್ನಡ, ಅರೇಬಿಕ್, ಹಿಂದಿ, ಸಂಸ್ಕೃತ, ಇಂಗ್ಲಿಷ್ ನಲ್ಲಿ ಪ್ರಾವಿಣ್ಯತೆ ಪಡೆದಿದ್ದರು. ಅನಾಥ ಮುಸ್ಲಿಂ ರು, ಸಂಚಿತ ಚಿಂತನ,ಬಾಳು – ಬದುಕು ಕೃತಿಗಳ ಲೇಖಕರು.ಶ್ರೀಯುತರ ಸಂಸ್ಮರಣೆಯಲ್ಲಿ ಈ ಗಾಂಧೀ ಸೇವಾ ಪ್ರಶಸ್ತಿಯನ್ನು ಮಂಡ್ಯದ ಗಾಂಧೀ ಭವನ ದಲ್ಲಿ ಜುಲೈ ಐದರಂದು ನೀಡಿ ಗೌರವಿಸಲಾಗುತ್ತಿದೆ ಎಂದು ಪ್ರಕಟಣೆ ಯಲ್ಲಿ ತಿಳಿಸಿದೆ