ಶ್ರೀನಗರ: ಜಮ್ಮು ಮತ್ತು ಕಾಶ್ನೀರದ ಅಮರನಾಥನ ಯಾತ್ರೆ ಆರಂಭವಾಗಿದೆ, ಭಕ್ತರ ಮೊದಲ ತಂಡ ಯಾತ್ರೆಯನ್ನ ಇಂದು ಪ್ರಾರಂಭಿಸಿದ್ದು, ಭೋಲೆನಾಥನ ದರ್ಶನವನ್ನು ನಾಳೆ ಪಡೆಯಲಿದ್ದಾರೆ, ರಾಜ್ಯದಲ್ಲಿ ಇತ್ತೀಚಿನ ಭಯೋತ್ಪಾದಕ ದಾಳಿಯ ಹಿನ್ನೆಲೆ ಈ ಬಾರಿ ಅಮರನಾಥ ಯಾತ್ರೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ, ಭಕ್ತರು ನಿಶ್ಚಿಂತರಾಗಿ ಈಗ ಪವಿತ್ರಯಾತ್ರೆಯನ್ನು ಪ್ರಾರಂಭಸಿದ್ದಾರೆ,
ಹೂವುಗಳಿಂದ ಹಾರ ಹಾಕಿ ಸಾಂಪ್ರದಾಯಿಕ ಕಾಶ್ಮೀರಿ ಆತಿಥ್ಯದೊಂದಿಗೆ ಸ್ವಾಗತಿಸಲ್ಪಟ್ಟ 5,892 ಜನರ ತಂಡದ ಭಾಗವಾಗಿರುವ ಯಾತ್ರಿಕರನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮುಂಜಾನೆ ಭಗವತಿ ನಗರದ ಜಮ್ಮು ಮೂಲ ಶಿಬಿರದಿಂದ ಹಸಿರು ನಿಶಾನೆ ತೋರಿದರು, 310 ವಾಹನಗಳ ಬೆಂಗಾವಲು ಪಡೆ ದಕ್ಷಿಣ ಕಾಶ್ನೀರದ ಪವಿತ್ರ ಅಮರನಾಥ ಗುಹಾ ದೇವಾಲಯದ ಕಡೆಗೆ ಭಕ್ತರನ್ನು ಕರೆದೊಯ್ಯುತ್ತಿದೆ,
ಅಮರನಾಥ ಯಾತ್ರಿಕರ ಮೊದಲ ಬೆಂಗಾವಲು ಪಡೆ ಖಾಜಿಗುಂಡ್-ಬನಿಹಾಲ್ ಸುರಂಗವನ್ನು ದಾಟುತ್ತಿದ್ದಂತೆ ಬುಧವಾರ ಕಾಶ್ನೀರ ಕಣೆವೆಯಾದ್ಯಂತ ಬಂ ಬಂ ಭೋಲೆ, ಹರ್ ಹರ್ ಮಹಾದೇವ್ ಘೋಷಣೆಗಳು ಪ್ರತಿಧ್ವನಿಸಿದೆ,
Veekay News > National News > ಕಾಶ್ಮೀರದಲ್ಲಿ ಹರ್ ಹರ್ ಮಹಾದೇವ್ ಘೋಷಣೆ
ಕಾಶ್ಮೀರದಲ್ಲಿ ಹರ್ ಹರ್ ಮಹಾದೇವ್ ಘೋಷಣೆ
ವೀ ಕೇ ನ್ಯೂಸ್03/07/2025
posted on

the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply