Live Stream

[ytplayer id=’22727′]

| Latest Version 8.0.1 |

State News

ಓರ್ವ ಎಂಎಲ್‍ಸಿ ಹೀಗಾ ಮಾತಾಡೋದು?: ರವಿಕುಮಾರ್ ವಿರುದ್ಧ ದೂರು

ಓರ್ವ ಎಂಎಲ್‍ಸಿ ಹೀಗಾ ಮಾತಾಡೋದು?: ರವಿಕುಮಾರ್ ವಿರುದ್ಧ ದೂರು

ಬೆಂಗಳೂರು: ಸದಾ ಒಂದಿಲ್ಲೊಂದು ಹೇಳಿಕೆ ಕೊಟ್ಟು ಸೃಷ್ಟಿಸುವ ಬಿಜೆಪಿ ಎಂಎಲ್‍ಸಿ ರವಿಕುಮಾರ್ ಗೆ ದೊಡ್ಡ ಸಂಕಷ್ಟ ಎದುರಾಗಿದ್ದು ಬೆಂಗಳೂರಲ್ಲಿ ಪ್ರಕರಣ ದಾಖಲಾಗಿದೆ,
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿದ ಆರೋಪ ಮೇಲೆ ಬಿಜೆಪಿ ಪರಿಷತ್ ಸದಸ್ಯ ಎನ್ ರವಿಕುಮಾರ್ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಶೀಘ್ರದಲ್ಲಿ ಕಾನೂನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ,
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ಅವರು ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿ ರವಿಕುಮಾರ್ ನಾಲಗೆ ಹರಿಬಿಟ್ಟಿದ್ದರು,
ಕಳೆದ ಕೆಲ ದಿನಗಳ ಹಿಂದೆಷ್ಟೇ ಕಲಬುರಗಿ ಡಿಸಿ ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಇಲ್ಲಿ ಐಎಎಸ್ ಅಧಿಕಾರಿಯೋ ನನಗೆ ತಿಳಿದಿಲ್ಲ ಎಂದು ಹೇಳಿ ವಿವಾದ ಮಾಡಿಕೊಂಡಿದ್ದರು,ಇದೀಗ ಮತ್ತೆ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ವೀ ಕೇ ನ್ಯೂಸ್
";