ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಹಾಗೂ ಸಿಎಂ ಬದಲಾವಣೆಯ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದವರಿಗೆ ಸಿಎಂ ತಿರುಗೇಟು ನೀಡಿದ್ದಾರೆ, ರಾಜ್ಯದಲ್ಲಿ ಕಲ್ಲು ಬಂಡೆಯ ರೀತಿ ನಾನೇ ಅಧಿಕಾರ ನಡೆಸುತ್ತೇನೆ, ಐದು ವರ್ಷ ಪೂರೈಸುತ್ತೇವೆ ಎಂದು ಹೇಳಿದರು,
ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು ಬಿಜೆಪಿಯವರಿಗೆ ಸತ್ಯ ಅಂದರೆ ಏನು ಅಂತಲೇ ಗೊತ್ತಿಲ್ಲ, ಸುಳ್ಳು ಹೇಳುವುದರಲ್ಲಿ ಅವರಿಗೆ ಸಾಟಿಯಿಲ್ಲ, ಬಿಜೆಪಿಯವರು ನಂಬುತ್ತಾರೋ, ಇಲ್ಲವೋ ಗೊತ್ತಿಲ್ಲ, ಒಂದಂತು ಸತ್ಯ ಕಾಂಗ್ರೆಸ್ ಐದು ವರ್ಷ ಅಧಿಕಾರ ಪೂರೈಸುತ್ತದೆ ಎಂದು ಹೇಳಿದರು,
ಬಿಜೆಪಿಯವರು ಹಗಲುನಗಸು ಕಾಣುತ್ತಿದ್ದಾರೆ, ಕಾಂಗ್ರೆಸ್ ನಲ್ಲಿ ಯಾವುದೇ ಆಂತರಿಕ ಕಲಹವಿಲ್ಲ, ನಾವೆಲ್ಲರೂ ಕೂಡ ಒಂದಾಗಿದ್ದೇವೆ, ರಾಜ್ಯದಲ್ಲಿ ಐದು ವರ್ಷ ಅಧಿಕಾರಿವನ್ನು ಪೂರೈಸುತ್ತೇವೆ, ಅಲ್ಲದೇ ಕಲ್ಲು ಬಂಡೆಯಂತೆ ನಾನೇ ಸಿಎಂ ಆಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು,
ಕುಮಾರಸ್ವಾಮಿ ಕೂಡ ಅಧಿಕಾರ ನಡೆಸಿದರೂ ರಾಜ್ಯಕ್ಕೆ ಏನು ಮಾಡಿದ್ದಾರೆ, ಯಾವ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ, ಅವರ ಅಧಿಕಾರದಲ್ಲಿದ್ದಾಗ ಕೇವಲ ಜನರ ದಿಕ್ಕು ತಪ್ಪಿಸಿದ್ದು, ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ಸಿಎಂ ಕಿಡಿಕಾರಿದರು,