Live Stream

[ytplayer id=’22727′]

| Latest Version 8.0.1 |

Viral News

ರಾಜ್ಯ ಬಿಜೆಪಿ ಕಚೇರಿ ‘ಜಗನ್ನಾಥ ಭವನ’ ಸ್ಫೋಟ ಪ್ರಕರಣ: ಶಂಕಿತ ಉಗ್ರನ ಬಂಧನ!

ರಾಜ್ಯ ಬಿಜೆಪಿ ಕಚೇರಿ ‘ಜಗನ್ನಾಥ ಭವನ’ ಸ್ಫೋಟ ಪ್ರಕರಣ: ಶಂಕಿತ ಉಗ್ರನ ಬಂಧನ!

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನ ಮುಂಭಾಗ 2013 ರಲ್ಲಿ ನಡೆದ ಬಾಂ*ಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬ0ಧಿಸಿದ0ತೆ ಶಂಕಿತ ಉಗ್ರ ನಗೂರ್ ಅಬೂಬಕರ್ ಸಿದ್ದಿಕ್‌ನನ್ನು ತಮಿಳುನಾಡು ಪೊಲೀಸರು ಬಂಧಿಸಿರುವುದಾಗಿ ವರದಿಗಳು ತಿಳಿಸಿವೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಬಂಧಿಸಿದ್ದಾರೆ ಎನಲಾಗಿದ್ದು, ಈ ಬಂಧನವು 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರನ ವಿರುದ್ಧದ ತನಿಖೆಯಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದಿಕ್‌ನ ಜೊತೆಗೆ ಆತನ ಸಹಾಯಕ ತಿರುನಲ್ವೇಲಿ ಮೊಹಮ್ಮದ್ ಅಲಿ ಸಹಾ ಬಂಧನಕ್ಕೊಳಗಾಗಿದ್ದಾನೆ ಎನ್ನಲಾಗಿದೆ.
ಆಗ 2013 ರ ಏಪ್ರಿಲ್ 17 ರಂದು ಬೆಂಗಳೂರಿನ ಮಲ್ಲೇಶ್ವರ ಬಿಜೆಪಿ ಕಚೇರಿ ಮುಂಭಾಗ ನಡೆದ ಸ್ಫೋಟದಲ್ಲಿ 16 ಜನರು ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣದಲ್ಲಿ ನಗೂರ್ ಅಬೂಬಕರ್ ಸಿದ್ದಿಕ್ ಪ್ರಮುಖ ಶಂಕಿತನಾಗಿದ್ದ.

2011 ರಲ್ಲಿ ಮದುರೈನಲ್ಲಿ ಬಿಜೆಪಿ ಮುತ್ಸದ್ದಿ ಎಲ್.ಕೆ.ಆಡ್ವಾಣಿಯವರ ರಥಯಾತ್ರೆಯ ಮಾರ್ಗದಲ್ಲಿ ಪೈಪ್ ಬಾಂಬ್ ಇರಿಸಿದ ಯತ್ನ, 1995 ರಲ್ಲಿ ಚೆನ್ನೆನ ಚಿಂತಾದ್ರಿಪೇಟ್‌ನ ಹಿಂದೂ ಮುನ್ನಾನಿ ಕಚೇರಿಯಲ್ಲಿ ನಡೆದ ಬಾಂಬ್ ಸ್ಫೋಟ, ಮತ್ತು ನಾಗೋರ್‌ನಲ್ಲಿ ಪಾರ್ಸೆಲ್ ಬಾಂಬ್ ದಾಳಿಯಲ್ಲಿ ಹಿಂದೂ ಕಾರ್ಯಕರ್ತ ಮುತ್ತುಕೃಷ್ಣನ್‌ನ ಕೊಲೆಯೂ ಸೇರಿದಂತೆ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಿದ್ದಿಕ್ ಭಾಗಿಯಾಗಿದ್ದ ಎನ್ನಲಾಗಿದೆ.
1999 ರಲ್ಲಿ ಚೆನ್ನೆನ ಪೊಲೀಸ್ ಕಮಿಷನರ್ ಕಚೇರಿ ಸೇರಿದಂತೆ ಚೆನ್ನೆ, ತಿರುಚಿ, ಕೊಯಮತ್ತೂರು, ಮತ್ತು ಕೇರಳದ ಏಳು ಕಡೆಗಳಲ್ಲಿ ಬಾಂಬ್ ಇರಿಸಿದ ಪ್ರಕರಣದಲ್ಲಿಯೂ ಆತ ಪ್ರಮುಖ ಪಾತ್ರ ವಹಿಸಿದ್ದ. 2012 ರಲ್ಲಿ ವೆಲ್ಲೂರಿನಲ್ಲಿ ಡಾ. ಅರವಿಂದ್ ರೆಡ್ಡಿಯ ಕೊಲೆ ಪ್ರಕರಣದಲ್ಲೂ ಸಿದ್ದಿಕ್ ಶಂಕಿತನಾಗಿದ್ದ.
ತ.ನಾಡು ಪೊಲೀಸರ ವಿಶೇಷ ತಂಡವು ಗುಪ್ತಚರ ಮಾಹಿತಿಯ ಆಧಾರದ ಮೇಲೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಈ ಬಂಧನ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.. ಸಿದ್ದಿಕ್ ಮತ್ತು ಆತನ ಸಹಾಯಕ ಮೊಹಮ್ಮದ್ ಅಲಿ 30 ವರ್ಷಗಳಿಂದ ಪೊಲೀಸರಿಗೆ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ. ದಕ್ಷಿಣ ಭಾರತದ ವಿವಿಧ ಭಯೋತ್ಪಾದಕ ಘಟನೆಗಳ ತನಿಖೆಗೆ ಹೊಸ ಆಯಾಮ ನೀಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತ.ನಾಡು ಪೊಲೀಸರ ಹೇಳಿಕೆಯಂತೆ, `ನಗೂರ್ ಅಬೂಬಕರ್ ಸಿದ್ದಿಕ್ ಮತ್ತು ತಿರುನೆಲ್ವೇಲಿ ಮೊಹಮ್ಮದ್ ಅಲಿ 1995 ರಿಂದ ತಮಿಳುನಾಡಿನಲ್ಲಿ ವಿವಿಧ ಬಾಂಬ್ ಸ್ಫೋಟಗಳು, ಧಾರ್ಮಿಕ ಘರ್ಷಣೆ, ಕೊಲೆಗಳು, ಹಿಂದೂ ನಾಯಕರುಗಳ ಕೊಲೆ ಸಂಚಿನ ಯತ್ನಗಳು ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಜವಾಬ್ದಾರರು. ಈ ಬಂಧನವು ಭಯೋತ್ಪಾದಕ ಜಾಲದ ಒಡೆಯುವಿಕೆಗೆ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";