ಒಂಟಿ ಮನೆ ಯೋಜನೆ ಅನುದಾನ ಬಿಡುಗಡೆ ಮಾಡಿ, 12692ಪೌರ ನೇಮಕಾತಿ ಸರಳೀಕರಣ ಮಾಡಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಬೃಹತ್ ಪ್ರತಿಭಟನೆ,ತಮಟೆ ಚಳುವಳಿ. ಬಿಬಿಎಂಪಿ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಎಸ್.ಸಿ./ಎಸ್.ಟಿ. ಅನುದಾನ ದುರ್ಬಳಕೆ ಹಾಗೂ ಪೌರ ಕಾರ್ಮಿಕರ ನೇಮಕಾತಿ ಸರಳ ರೀತಿಯಲ್ಲಿ ನೇಮಕಾತಿ, ಒಂಟಿ ಮನೆಗಳಿಗೆ ಅನುದಾನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ,ತಮಟೆ ಚಳುವಳಿ. ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಚಳುವಳಿ ಅಯ್ಯಪ್ಪ ಕೆ ಮತ್ತು ಜಿಲ್ಲಾಧ್ಯಕ್ಷ ಎನ್.ಪ್ರಸಾದ್ ರವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ಪಾಲ್ಗೊಂಡಿದ್ದರು.
ರಾಜ್ಯಾಧ್ಯಕ್ಷ ಚಳುವಳಿ ಅಯ್ಯಪ್ಪ ಕೆ ರವರು ಮಾತನಾಡಿ ಬೆಂಗಳೂರುನಗರ ಇಂದು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಲ್ಲರು ನಗರವನ್ನು ಇಷ್ಟಪಡುತ್ತಿದ್ದಾರೆ .ನಾಗರಿಕರ ವೇಗಕ್ಕೆ ಬೆಂಗಳೂರುನಗರ ಅಭಿವೃದ್ದಿಯಾಗುತ್ತಿಲ್ಲ. ಇದೆಕ್ಕಲ್ಲ ಕಾರಣ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರ ಕಾರಣ.
ಎಸ್.ಸಿ/ಎಸ್.ಟಿ.ಮತ್ತು ಟಿ.ಎಸ್.ಪಿ.ದಲಿತ ಸಮುದಾಯಕ್ಕೆ ಅಭಿವೃದ್ದಿ ಇಟ್ಟ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಅನ್ಯ ಕಾಮಗಾರಿಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. 12692ಪೌರ ಕಾರ್ಮಿಕರನ್ನು ನೇರ ನೇಮಕಾತಿಯಲ್ಲಿ ಕಠಿಣ ಷರತ್ತು ವಿಧಿಸದೇ ನೇಮಕಾತಿ ಮಾಡಿ. ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಎಸ್.ಸಿ/ಎಸ್.ಟಿ. ಸಮುದಾಯಕ್ಕೆ ಕಳೆದ ನಾಲ್ಕು ವರ್ಷಗಳಿಂದ ಒಂಟಿ ಮನೆ ಯೋಜನೆ ಅನುದಾನ ನೀಡಿಲ್ಲ ಅನುದಾನ ಬಿಡುಗಡೆ ಮಾಡಿ.
ಭ್ರಷ್ಟಾಚಾರದಲ್ಲಿ ತೊಡಗಿರುವ ಮತ್ತು ಎಸ್.ಸಿ/ಎಸ್.ಟಿ.ಅನುದಾನ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಗಳ ಮೇಲೆ ಉಗ್ರ ಕ್ರಮವಾಗಬೇಕು, ನಿಷ್ಟಾವಂತ ಅಧಿಕಾರಿಗಳನ್ನು ನೇಮಕ ಮಾಡಿ ಬೆಂಗಳೂರುನಗರವನ್ನು ಉಳಿಸಬೇಕು ಎಂದು ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ, ಮುಖ್ಯ ಆಯುಕ್ತರು ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಪ್ರಸಾದ್ ಎನ್ ರವರು ಮಾತನಾಡಿ ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಕಡಿವಾಣ ಹಾಕಬೇಕು, ಭ್ರಷ್ಟಚಾರದಿಂದ ಬೆಂಗಳೂರುನಗರ ಅಭವೃದ್ದಿಗೆ ಮಾರಕವಾಗಿದೆ. ಎಸ್.ಸಿ/ಎಸ್.ಟಿ ಅನುದಾನ ದುರ್ಬಳಕೆ ಮಾಡಿಕೊಂಡ ಅಧಕಾರಿಗಳನ್ನು ವಜಾ ಮಾಡಬೇಕು ಮತ್ತು ಒಂಟಿ ಮನೆ ಯೋಜನೆಯ ಫಲಾನುಭವಿಗಳಿಗೆ ಕೊಡಲೆ ಹಣ ಬಿಡುಗಡೆ ಮಾಡಬೇಕು ಎಂದು ಹೇಳಿದರು.