ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ದಿನಾಂಕ:15-08-2025 ರಂದು ರಾಜ್ಯ ಮಟ್ಟದ 79ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಕಾರ್ಯಕ್ರಮ ಸುಲಲಿತವಾಗಿ ನಡೆಯಲು ಹಾಗೂ ಮೈದಾನದ ಭದ್ರತೆಯ ಸಲುವಾಗಿ ಮುಂಜಾಗೃತ ಕ್ರಮಗಳಾಗಿ ಕಳೆದ 15 ದಿನಗಳಿಂದ ಮೈದಾನಕ್ಕೆ ಪೊಲೀಸರನ್ನು ಕಣ್ಗಾವಲು ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ. ಹಾಗೂ ಬೆಂಗಳೂರು ನಗರದ ಎಲ್ಲಾ ಹೋಟೆಲ್, ಲಾಡ್ಜ್‍ಗಳು, ತಂಗುದಾಣಗಳು, ಇನ್ನಿತರೆ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡುವವರ ಮೇಲೆ ಸೂಕ್ತ ನಿಗಾವಹಿಸಲಾಗಿರುತ್ತದೆ.
ದಿನಾಂಕ:15-08-2025 ರ ಧ್ವಜಾರೋಹಣ, ಕವಾಯತು ಹಾಗೂ ಸಾಂಸ್ಕತಿಕ ಸಮಾರಂಭದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದು, ಈ ಸಂಬಂಧ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿರ್ವಹಣೆಗಾಗಿ ವಿಸ್ತøತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
ಮೈದಾನದ ಸುತ್ತ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ನಿಗಾವಹಿಸಲು ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಮತ್ತು ಬ್ಯಾಗೇಜ್ ಸ್ಕ್ಯಾನರ್, ಡಿಎಫ್‍ಎಂಡಿ ಮತ್ತು ಹೆಚ್.ಹೆಚ್.ಎಂ.ಡಿ.ಗಳನ್ನು ಅಳವಡಿಸಲಾಗಿರುತ್ತದೆ.
ಸ್ವಾತಂತ್ರೋತ್ಸವದ ಆಚರಣೆ ಸಂಬಂಧ ಕಾರ್ಯಕ್ರಮಕ್ಕೆ ಆಗಮಿಸುವವರ ಭದ್ರತೆಯ ದೃಷ್ಟಿಯಿಂದ ಆಹ್ವಾನಿತರುಗಳಿಗೆ ಪಾಸ್‍ಗಳನ್ನು ವಿತರಿಸಲಾಗಿದ್ದು, ಡಾರ್ಕ್ ಪಿಂಕ್ ಬಣ್ಣದ ವಿವಿಐಪಿ ಪಾಸ್ ಹೊಂದಿರುವವರು ಗೇಟ್ ನಂ.02 ರಲ್ಲಿ ಕ್ರ.ಸಂ 1 ರಿಂದ 500 ವರೆಗಿನ ಗಣ್ಯರು/ಅಧಿಕಾರಿಗಳು ಬ್ಲಾಕ್ 01 ರಲ್ಲಿ ಪ್ರವೇಶಿಸಿ, ಸಂಬಂಧಪಟ್ಟ ಗಣ್ಯರು/ಹಿರಿಯ ಅಧಿಕಾರಿಗಳ ಹೆಸರುಗಳನ್ನು ಸೂಚಿಸಿರುವ ಆಸನಗಳನ್ನು ಬಿಟ್ಟು ಇತರೆ ಆಸನಗಳಲ್ಲಿ ಆಸಿನರಾಗುವುದು.
ಲೈಟ್ ಪಿಂಕ್ ಬಣ್ಣದ ಕ್ರ.ಸಂ. 501 ರಿಂದ 2500 ವರೆಗಿನ ವಿವಿಐಪಿ ಪಾಸ್ ಹೊಂದಿರುವ ಗಣ್ಯರು/ಅಧಿಕಾರಿಗಳು ಗೇಟ್ ನಂ 02 ರಲ್ಲೇ ಪ್ರವೇಶಿಸಿ, ಬ್ಲಾಕ್ 02 ಮತ್ತು 03 ರಲ್ಲಿ ಆಸಿನರಾಗುವುದು.
ಗೇಟ್ ನಂ.04 ರಲ್ಲಿ ಬಿಳಿ ಬಣ್ಣದ ಪಾಸ್ ಹೊಂದಿರುವವರಿಗೆ ಪ್ರವೇಶವಿದ್ದು, ಸದರಿಯವರು ಬ್ಲಾಕ್ 04, 05 ಮತ್ತು 06 ರಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರುತ್ತದೆ.
ಗೇಟ್ ನಂ 04 ರ ಮೂಲಕ ಮಾಧ್ಯಮದವರಿಗೆ ಪ್ರವೇಶ ಕಲ್ಪಿಸಲಾಗಿದ್ದು, ಎಲೆಕ್ಟ್ರಾನಿಕ್ ಮಾದ್ಯಮದವರು ಮೀಡಿಯಾ ಬಾಕ್ಸ್‍ಗೆ ತೆರಳುವುದು ಮತ್ತು ಪ್ರಿಂಟ್ ಮಾದ್ಯಮದವರು ಬ್ಲಾಕ್ ನಂ.4 ರಲ್ಲಿ ಮಾದ್ಯಮದವರಿಗೆ ಕಾಯ್ದಿರಿಸಿರುವ ಸ್ಥಳದಲ್ಲಿ ಕುಳಿತುಕೊಳ್ಳುವುದು. ಗೇಟ್ ನಂ 04 ರಲ್ಲಿ ಮಾಧ್ಯಮದ ಓ.ವಿ. ವಾಹನಗಳ ಪ್ರವೇಶಕ್ಕೆ ಅವಕಾಶವಿರುತ್ತದೆ.
ಗೇಟ್ ನಂ 05 ರಲ್ಲಿ ಹಸಿರು ಬಣ್ಣದ ಪಾಸ್ ಹೊಂದಿರುವ ಸಾರ್ವಜನಿಕರಿಗೆ ಪ್ರವೇಶವಿದ್ದು, ಇವರುಗಳು ಬ್ಲಾಕ್ ನಂ 07, 08, 09 ರಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರುತ್ತದೆ. ಮತ್ತು ಇ-ಪಾಸ್ ಹೊಂದಿರುವ ಸಾರ್ವಜನಿಕರು ಅಸಲು ಗುರುತಿನ ಚೀಟಿಯೊಂದಿಗೆ ಗೇಟ್ ನಂ. 05ರಲ್ಲಿ ಪ್ರವೇಶಿಸಿ, ಬ್ಲಾಕ್ ನಂ.07, 08, 09 ರಲ್ಲಿ ಕುಳಿತುಕೊಳ್ಳುವುದು. ಕಾರ್ಯಕ್ರಮದ ಭದ್ರತಾ ದೃಷ್ಟಿಯಿಂದ ಗೇಟ್‍ಗಳ ಬಳಿ ತಪಾಸಣೆಗೆ ಒಳಪಟ್ಟು ಪೊಲೀಸರೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸುವವರಲ್ಲಿ ಮನವಿ
ಸಮಾರಂಭಕ್ಕೆ ಆಗಮಿಸುವವರು ಬೆಳಿಗ್ಗೆ 08-30 ರ ಒಳಗಾಗಿ ತಮ್ಮ ಆಸನಗಳಲ್ಲಿ ಆಸೀನರಾಗತಕ್ಕದ್ದು. ಯಾವುದೇ ಕಾರಣಕ್ಕೂ ಮೈದಾನದದೊಳಗೆ ಪ್ರವೇಶಿಸತಕ್ಕದ್ದಲ್ಲ.
ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರು, ಹಸಿರು ಬಣ್ಣದ ಪಾಸ್ (ಇ-ಪಾಸ್) ಹೊಂದಿರುವವರು ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್‍ರಸ್ತೆ ಮೂಲಕ ಗೇಟ್ ನಂ.05 ರಲ್ಲಿ ಆಗಮಿಸಲು ಸೂಚಿಸಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರು ತಮ್ಮೊಂದಿಗೆ ಅನಗತ್ಯವಾದ ಲಗೇಜು ಹಾಗೂ ಇತರೆ ವಸ್ತುಗಳನ್ನು ತರುವಂತಿಲ್ಲ.
ಯಾವುದಾದರೂ ಅನುಮಾನಾಸ್ಪದ ವಸ್ತುಗಳು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುವುದು.
ಭದ್ರತೆಯ ಅಂಗವಾಗಿ ಮೈದಾನಕ್ಕೆ ಆಗಮಿಸುವವರು ಗೇಟ್‍ಗಳ ಬಳಿ ತಪಾಸಣೆಗೆ ಪೊಲೀಸರೊಂದಿಗೆ ಸಹಕರಿಸುವಂತೆ ಕೋರಲಾಗಿದೆ. ಹಾಗೂ ಈ ಕೆಳಕಂಡ ವಸ್ತುಗಳನ್ನು ಮೈದಾನದೊಳಗೆ ನಿಷೇಧಿಸಲಾಗಿದೆ.
ನಿಷಿದ್ಧ ವಸ್ತುಗಳು:
ಸಿಗರೇಟ್, ಬೆಂಕಿ ಪೆಟ್ಟಿಗೆ. ಹರಿತವಾದ ವಸ್ತು ಹಾಗೂ ಚಾಕು-ಚೂರಿಗಳು.
ಕರಪತ್ರಗಳು ಕಪ್ಪು ಕರವಸ್ತ್ರಗಳು.
ಬಣ್ಣದ ದ್ರಾವಣಗಳು ತಿಂಡಿ, ತಿನಿಸುಗಳು.
ವಿಡಿಯೋ ಮತ್ತು ಸ್ಟಿಲ್ ಕ್ಯಾಮರಾಗಳು. ಮದ್ಯದ ಬಾಟಲ್‍ಗಳು/ಮಾದಕ ವಸ್ತುಗಳು
ನೀರಿನ ಬಾಟಲ್‍ಗಳು ಹಾಗೂ ಕ್ಯಾನ್‍ಗಳು. ಪಟಾಕಿ ಮತ್ತು ಸ್ಫೋಟಕ ವಸ್ತುಗಳು. ಶಸ್ತ್ರಾಸ್ತ್ರಗಳು