ಬೆಂಗಳೂರು, ಆಗಸ್ಟ್ 14 (ಕರ್ನಾಟಕ ವಾರ್ತೆ):
79ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ 2025ನೇ ಆಗಸ್ಟ್ 16, 17 ಮತ್ತು 18 ರಂದು ಮೂರು ದಿನಗಳ ರಾಜಭವನದ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸದರಿ ಮೂರು ದಿನಗಳು ಸಂಜೆ 6 ರಿಂದ 7:30 ಗಂಟೆಯವರೆಗೆ ವೀಕ್ಷಣೆ ಮಾಡಬಹುದಾಗಿದೆ.
ರಾಜಭವನದ ಪ್ರವೇಶದ ಸಂದರ್ಭದಲ್ಲಿ ಭದ್ರತಾ ತಪಾಸಣೆ:
ರಾಜಭವನದ ವೀಕ್ಷಣೆಗೆ ಆಗಮಿಸವ ಸಾರ್ವಜನಿಕರು ಸರ್ಕಾರದಿಂದ ವಿತರಿಸಿರುವ/ಸ್ಟಷ್ಟವಾಗಿ ಭಾವಚಿತ್ರವಿರುವ ಐ.ಡಿ. ಕಾರ್ಡ್‍ನ್ನು ಕಡ್ಡಾಯವಾಗಿ ತರುವುದು. ರಾಜಭವನದ ಪ್ರವೇಶದ ಸಂದರ್ಭದಲ್ಲಿ ಕಡ್ಡಾಯವಾಗಿ ಭದ್ರತಾ ತಪಾಸಣೆಗೆ ಒಳಪಡುವುದು. ರಾಜಭವನದ ಆವರಣದೊಳಗೆ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿರುವ ಸ್ಥಳಗಳನ್ನು ಬಿಟ್ಟು ಬೇರೆಡೆಗೆ ಪ್ರವೇಶಿಸಬಾರದು. ಸಾರ್ವಜನಿಕರು ಪ್ರವೇಶದ ಸಂದರ್ಭದಲ್ಲಿ ಮತ್ತು ಪ್ರವೇಶಿಸಿದ ನಂತರ ಭದ್ರತೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ನೀಡುವ ಸಲಹೆ/ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು. ಸಾರ್ವಜನಿಕರು ರಾಜಭವನದ ಆವರಣದೊಳಗೆ ಶಾಂತಿ ಮತ್ತು ನಿಶ್ಯಬ್ದ ಕಾಪಾಡುವ ಮೂಲಕ ಸಹಕರಿಸುವುದು.
ರಾಜಭವನದ ಪ್ರವೇಶದ ಸಂದರ್ಭದಲ್ಲಿ ನಿಷೇಧಿಸಲಾದ ಪದಾರ್ಥಗಳು:
ಸಾರ್ವಜನಿಕರು ರಾಜಭವನದ ಪ್ರವೇಶದ ಸಂದರ್ಭದಲ್ಲಿ ಮೊಬೈಲ್, ಲ್ಯಾಪ್ ಟಾಪ್, ಕ್ಯಾಮೆರಾಗಳನ್ನು ಮತ್ತು ಎಲ್ಲಾ ರೀತಿಯ ಎಲೆಕ್ಟ್ರಿಕಲ್ ಉಪಕರಣಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಚೂಪಾದ ವಸ್ತುಗಳು ಮತ್ತು ಎಲ್ಲಾ ರೀತಿಯ ಮೆಟಲ್ ವಸ್ತುಗಳು, ತಿಂಡಿ-ತಿನಿಸುಗಳು, ಪ್ಲಾಸ್ಟಿಕ್ ವಸ್ತುಗಳು, ಬೆಂಕಿ ಪೊಟ್ಟಣ, ಲೈಟರ್‍ಗಳು, ಎಲ್ಲಾ ರೀತಿಯ ಬ್ಯಾಗ್ ಮತ್ತು ಕೈಚೀಲಗಳನ್ನು ತಂಬಾಕು ಮತ್ತು ಮದ್ಯಪಾನ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ ರಾಜಭವನದಲ್ಲಿ ಸಾರ್ವಜನಿಕ ವಾಹನಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಸಾರ್ವಜನಿಕರು ಭದ್ರತಾ ಸಿಬ್ಬಂದಿಗಳು ನೀಡುವ ಸೂಚನೆಗಳನ್ನು ಪಾಲಿಸಿ ಸಂಪೂರ್ಣ ಸಹಕಾರ ನೀಡಬೇಕಾಗಿ ಕೋರಿದೆ.