*ಬೆಂಗಳೂರು ದಕ್ಷಿಣ ವಿಪ್ರ ಬಳಗ: ಕಾರ್ಯಕರ್ತರಿಗೆ ಕೃತಜ್ಞತಾ ಸಭೆ, ಸದಸ್ಯತ್ವ ಅಭಿಯಾನ*
*ವಿಪ್ರರು ಸರಸ್ವತಿ ಪುತ್ರರು,ವಿಪ್ರರ ಸಮಾರಂಭಗಳಿಗೆ ಉತ್ತಮ ಜಾಗ ನೀಡಲಾಗುವುದು- ಶಾಸಕ ಎಂ.ಕೃಷ್ಣಪ್ಪ*
*ವಿಪ್ರ ಸಮುದಾಯದ ಶಿಕ್ಷಣ, ಆರೋಗ್ಯಕ್ಕೆ ಸಹಾಯಹಸ್ತ ನೀಡಲು 100ಕೋಟಿ ದತ್ತನಿಧಿ-ಎಸ್.ರಘುನಾಥ್*
ಬೆಂಗಳೂರು: ಕೋಣನಕುಂಟೆ, ಶ್ರೀ ಲಕ್ಷ್ಮಿನರಸಿಂಹ ಸಭಾಂಗಣದಲ್ಲಿ ಬೆಂಗಳೂರು ದಕ್ಷಿಣ ವಿಪ್ರ ಬಳಗದ ವತಿಯಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ದಕ್ಷಿಣ ಕ್ಷೇತ್ರದ ಮಹನೀಯರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಕೃಷ್ಣಪ್ಪರವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್.ರಘುನಾಥ್ ರವರು, ಉಪಾಧ್ಯಕ್ಷರಾದ ಎಂ.ನರಸಿಂಹನ್, ಶಾಸಕರಾದ ಎಂ.ಕೃಷ್ಣಪ್ಪ, ಹಿರಿಯ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್, ಖಜಾಂಚಿ ಸುಬ್ಬನರಸಿಂಹ, ದಕ್ಷಿಣ ಜಿಲ್ಲಾ ಪ್ರತಿನಿಧಿಗಳಾದ ಕೆ.ಎನ್.ರವಿಕುಮಾರ್, ಕೆ.ಸತೀಶ್ ಉರಾಳ್, ಶ್ರೀಮತಿ ಅಂಬಿಕಾ ರಾಮಚಂದ್ರ, ಆರ್.ಜಿ.ರಾಜಶೇಖರ್ ರವರು ಗಾಯಿತ್ರಿದೇವಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
*ಶಾಸಕರಾದ ಎಂ.ಕೃಷ್ಣಪ್ಪರವರು* ಮಾತನಾಡಿ ವಿಪ್ರ ಸಂಘಟನೆಯಲ್ಲಿ ಉತ್ತಮ ವ್ಯಕ್ತಿಗಳು ಇದ್ದಾರೆ, ವಿಪ್ರರ ಅಭಿವೃದ್ದಿಗೆ ನಿಧಿ ಸಂಗ್ರಹ ವೇಗವಾಗಿ ಆಗುತ್ತದೆ.
ವಿಪ್ರ ಸಮುದಾಯದವರು ಸರಸ್ವತಿ ಪುತ್ರರು, ವಿಪ್ರ ಸಮುದಾಯದವರು ಅತಿ ಎತ್ತರಕ್ಕೆ ಬೆಳದಿದ್ದಾರೆ.
ವಿಪ್ರ ಸಮುದಾಯ ಕಾರ್ಯಕ್ರಮಕ್ಕೆ ಭವನ ನಿರ್ಮಿಸಲಾಗಿದೆ. ಬೆಂಗಳೂರು ದಕ್ಷಿಣದಲ್ಲಿ ಸಮಾರಂಭ, ಕಾರ್ಯಕ್ರಮಗಳಿಗೆ ಉಚಿತ ಉತ್ತಮ ಜಾಗ ನೀಡಲಾಗುವುದು. ನಿಮ್ಮಲ್ಲಿ ನಾನು ಒಬ್ಬ ನಿಮ್ಮ ಸೇವೆ ಮಾಡಲು ಸದಾ ಸಿದ್ದ ಎಂದು ಹೇಳಿದರು.
*ಅಧ್ಯಕ್ಷರಾದ ಎಸ್.ರಘುನಾಥ್* ರವರು ಮಾತನಾಡಿ ವಿಪ್ರ ಭಾಂದವರಿಗೆ ಮೊದಲು ಧನ್ಯವಾದ ಹೇಳಬೇಕು ನನಗೆ ಸಹಕಾರ ನೀಡಿರುವುದಕ್ಕೆ. ವಿಪ್ರ ಸಮುದಾಯದ ಅಭಿವೃದ್ದಿ ಯೋಜನೆ ರೂಪಿಸಲಾಗಿದೆ.
ವಿಪ್ರ ಸಮುದಾಯದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಾಸಭಾದ ಸದಸ್ಯತ್ವ ಪಡೆಯಬೇಕು. ಕಾರ್ಯಕಾರಿ ಸಮಿತಿಯಲ್ಲಿರುವ ಸದಸ್ಯರು ಪ್ರತಿ ದಿನ ಒಬ್ಬರನ್ನ ಸದಸ್ಯತ್ವ ನೋಂದಾಣೆ ಮಾಡಿಸಬೇಕು.
ವಿಪ್ರ ಸಮುದಾಯದವರಿಗೆ ಶಿಕ್ಷಣ ಮತ್ತು ಆರೋಗ್ಯದ ಕುರಿತು ವಿಪ್ರರಿಗೆ ಸಹಾಯಹಸ್ತ ನೀಡಲು 100ಕೋಟಿ ರೂಪಾಯಿ ದತ್ತಿನಿಧಿ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ. ಇದರಲ್ಲಿ ಈಗಾಗಲೇ 52ಲಕ್ಷ ರೂಪಾಯಿ ಸಂಗ್ರಹವಾಗಿದೆ. ವಿಪ್ರರ ಅಭಿವೃದ್ದಿಗೆ ಶ್ರೀಮಂತರ ವಿಪ್ರರು ದೇಣಿಗೆ ನೀಡಬೇಕು.
ಹಿಂದೆ ಸಮಾವೇಶದಲ್ಲಿ 1ಕೋಟಿ ರೂಪಾಯಿ ಉಳಿತಾಯವಿದೆ ಅದನ್ನ ಸುವರ್ಣ ಭವನ ಅಭಿವೃದ್ದಿಗೆ ಉಪಯೋಗಿಸಲಾಗುವುದು ಎಂದು ಹೇಳಿದರು.
*ಎಂ.ನರಸಿಂಹನ್* ರವರು ಮಾತನಾಡಿ ಸುವರ್ಣಭವನ ನಿರ್ಮಾಣ ಕಾರ್ಯ ಬಿ.ಎನ್.ವಿ.ಸುಬ್ರಹ್ಮಣ್ಯರವರ ಕನಸಾಗಿತ್ತು. ಪ್ರತಿಯೊಬ್ಬ ವಿಪ್ರ ಸದಸ್ಯರು ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು 12ಲಕ್ಷ ಮಹಾಸಭಾದ ಸದಸ್ಯತ್ವ ಮಾಡಬೇಕು.
*ಆರ್.ಲಕ್ಷ್ಮಿಕಾಂತ್ ರವರು* ಮಾತನಾಡಿ ಐದು ವರ್ಷದಲ್ಲಿ ವಿಪ್ರ ಅಭಿವೃದ್ದಿಗೆ ಅಧ್ಯಕ್ಷರ ನೇತೃತ್ವದಲ್ಲಿ ಯೋಜನೆ ರೂಪಿಸಲಾಗಿದೆ, ವಿಪ್ರ ಭಾಂದವರು ಸಹಕಾರ ನೀಡಬೇಕು.
ವಿಪ್ರ ಸಮುದಾಯಕ್ಕೆ ಶಾಸಕರು ನೀಡುತ್ತಿರುವ ಸಹಕಾರಕ್ಕೆ ಸಂತೋಷಕರ ವಿಷಯವಾಗಿದೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬಲಿಷ್ಠ ಸಂಘಟನೆಯಾಗಬೇಕು ಎಂದು ಹೇಳಿದರು.
*ಸುಬ್ಬನರಸಿಂಹರವರು* ಮಾತನಾಡಿ ವಿಪ್ರ ಸಮುದಾಯದ ಏಳಿಗೆಗಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಸಂಘ ಶ್ರಮಿಸುತ್ತಿದೆ. ಜಾತಿಜನಗಣತಿಯಲ್ಲಿ ಶೈವ, ಮಾದ್ವ , ಶ್ರೀ ವೈಷವ ಎಂದು ಬರೆಸಬೇಡಿ ನಾವೆಲ್ಲರು ಒಂದೇ ಜಾತಿಗಣತಿಯಲ್ಲಿ ಬ್ರಾಹ್ಮಣ ಎಂದು ಬರೆಸಿ. ದತ್ತನಿಧಿಯಲ್ಲಿ ಎಲ್ಲ ಸಮುದಾಯದವರು ದೇಣಿಗೆ ನೀಡಬಹುದು.
ವಿಶೇಷ ಆಹ್ವಾನಿತರಾಗಿ ಮಾಜಿ ಪಾಲಿಕೆ ಸದಸ್ಯರುಗಳಾದ ಸೋಮಶೇಖರ್, ಜಯರಾಮ್ ಜಿಲ್ಲಾ ಪ್ರತಿನಿಧಿಗಳಾದ ಎಸ್.ಎಸ್.ಪ್ರಸಾದ್, ನಾಗೇಶ್ ,ದಿಲೀಪ್ ಕುಮಾರ್ , ಭಾಗವಹಿಸಿದ್ದರು.