ಶಿಡ್ಲಘಟ್ಟ : ಉಸ್ತುವಾರಿ ಸಚಿವರೇನು ನಿಮ್ಮ ಹಾಗೆ ಹಿಂಭಾಗಲಿನಿಂದ ರಾಜಕಾರಣ ಮಾಡುತ್ತಿಲ್ಲ. ನಗರಸಭೆ ಚುನಾವಣೆಯಲ್ಲಿ ಏನು ಮಾಡಿದ್ದೀರಿ ನಿಮ್ಮ ಗ್ರಾಮದಲ್ಲಿ ಡೈರಿ ಚುನಾವಣೆಯಲ್ಲಿ ನೀವು ಏನು ಮಾಡಿದ್ದೀರಿ ಕಾಂಗ್ರೆಸ್ ಪಕ್ಷದವರನ್ನ ಪಕ್ಕಕ್ಕೆ ಇಟ್ಟು ಜೆಡಿಎಸ್ ಪಕ್ಷದವರ ಜೊತೆ ಸೇರಿ ನಿರ್ದೇಶಕ ರಾಗಿದ್ದೀರಿ ಬೇರೆಯವರನ್ನ ಯಾಕೆ ದಾರಿ ತಪ್ಪಿಸುತ್ತೀರಿ ಮಾಜಿ ಗ್ರಾಪ ಅಧ್ಯಕ್ಷ ಡಿ ವಿ ಆಂಜನೇಯರೆಡ್ಡಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ವೈ ಹುಣಸೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಯುವ ಮುಖಂಡ ಎಚ್ ಕೆ ಸಂತೋಷ್ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗರಾಜಣ್ಣ ಅವರಿಗೆ ಎರಡು ವರ್ಷಗಳಿಂದ ಇಲ್ಲದೆ ಇರುವ ಕಾಂಗ್ರೆಸ್ ಪಕ್ಷದ ಪ್ರೀತಿ ಇತ್ತೀಚಿಗೆ ಒಂದು ತಿಂಗಳಿಂದೀಚೆಗೆ ಪಕ್ಷದ ಮೇಲೆ ಹೆಚ್ಚು ಕಾಳಜಿ ವಹಿಸಿದಂತಾಗಿದೆ. ಕಳೆದ ಎರಡು ವರ್ಷದ ಹಿಂದೆ ರಾಜೀವ್ ಗೌಡ ಅವರು ಅಧಿಕೃತ ಅಭ್ಯರ್ಥಿ ಎಂದು ಘೋಷಣೆಯಾದಾಗ ನಾವು ಅವರ ಪರವಾಗಿ ನಿಂತು ಅವರ ಪರವಾಗಿಯೇ ಚುನಾವಣೆ ಎದುರಿಸಿದ್ದೇವೆ. ಆದರೆ ದುರಾದೃಷ್ಟ ನಮ್ಮಲ್ಲಿ ಮತ್ತೊಬ್ಬರು ಪುಟ್ಟು ಆಂಜಿನಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಚುನಾವಣೆ ಸ್ಪರ್ಧಿಸಿ ಅವರು ಎರಡನೇ ಸ್ಥಾನಕ್ಕೆ ಜಿಗಿದರು. ನಾವು ಮೂರನೇ ಸ್ಥಾನ ಪಡಬೇಕಾಯಿತು. ಅದನ್ನ ಮನಗಂಡು ಚುನಾವಣೆ ಮುಗಿದ ಐದು ತಿಂಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು ನೀವು ಹೀಗೆ ಇದ್ದರೆ ನಿಮ್ಮ ಕ್ಷೇತ್ರದಲ್ಲಿ ತುಂಬಾ ಕಷ್ಟ ಆಗುತ್ತದೆ. ಅವರಿಬ್ಬರಲ್ಲಿ ಒಬ್ಬರನ್ನ ಮಾತ್ರ ಆಯ್ಕೆ ಮಾಡಿಕೊಂಡು, ಯಾರಲ್ಲಿ ಇಬ್ಬರಾದರೆ ಎಲ್ಲರೂ ಸೇರಿ ಎಲ್ಲರೂ ಸೇರಿ ತಾಲೂಕಿನಾದ್ಯಂತ ಓಡಾಡಿ ಕಾಂಗ್ರೆಸ್ ಪಕ್ಷದ ಸಭೆಯನ್ನ ಸೇರಿಸಲಾಯಿತು. ಆ ಸಭೆಯಲ್ಲಿ ನಾಗರಾಜಣ್ಣ ಅವರು ಇದ್ದರು. ಹಲವು ನಾಯಕರು ಭಾಷಣ ಮಾಡಿ ಎಲ್ಲರನ್ನ ಒಗ್ಗೂಡಿಸಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಒಗ್ಗಟ್ಟಾಗಬೇಕು ಎಂದರೆ ಒಬ್ಬರೇ ನಾಯಕರಾಗಬೇಕು ಎಂದು ಚರ್ಚಿಸಿದರು .ಆ ಸಮಯದಲ್ಲಿ ಕಾಂಗ್ರೆಸ್ ಭವನದಲ್ಲಿ ಎರಡು ಗುಂಪುಗಳಾಗಿ ವಿಂಗಡಣೆಯಾಯಿತು. ಗಲಾಟೆಯು ನಡೆಯಿತು. ಮರು ದಿನವೇ ನಮ್ಮ ನಾಯಕ ರಾಜೀವ್ ಗೌಡ ಅವರು ಅಷ್ಟೊಂದು ಕಷ್ಟಪಟ್ಟು ಪಕ್ಷಕ್ಕೆ ದುಡಿದಿದ್ದರು ನಮ್ಮನ್ನ ಒಂದೇ ಮಾತಿನಲ್ಲಿ ಕಿಡಿಗೇಡಿಗಳು ಎಂದು ಮಾತನಾಡಿದರು ಮತ ಹಾಕಿಸಿದ ತಪ್ಪಿಗೆ ನಮ್ಮನ್ನ ಕಿಡಿಗೇಡಿಗಳೆಂದರು ಆಗ ಅದರ ಬಗ್ಗೆ ಯಾರು ಚಕಾರ ಎತ್ತಲಿಲ್ಲ. ಆ ಸ್ಥಳದಲ್ಲಿ ನಮ್ಮ ನಾಗರಾಜಣ್ಣ ಅವರು ಇದ್ದರು ಅವರು ಬಾಯಿ ಬಿಚ್ಚಿಲ್ಲ ಯಾಕೆ ಇತರ ಮಾತನಾಡುತ್ತಿದ್ದೀರಿ ಇವರೆಲ್ಲರೂ ನಮ್ಮ ಪಕ್ಷದ ಕಾರ್ಯಕರ್ತರೇ ಎಂದು ಅವತ್ತು ಒಂದು ಮಾತು ಹೇಳದೆ ಮೌನ ವಹಿಸಿದ್ದೇಕೆ. ನಾವು ಅವತ್ತೇ ಕಾಂಗ್ರೆಸ್ ಭವನಕ್ಕೆ ಕೊನೆಯ ಹೆಜ್ಜೆಯನ್ನ ಇಟ್ಟಿದ್ದು ಇಲ್ಲಿಯವರೆಗೂ ನಾವು ಆ ಕಾಂಗ್ರೆಸ್ ಭವನಕ್ಕೆ ಹೋಗಿಲ್ಲ.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗರಾಜಣ್ಣ ಅವರು ಪಕ್ಷವನ್ನು ಮರೆತಿದ್ದರು. ಇತ್ತೀಚಿಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ನಮ್ಮ ನಾಗರಾಜಣ್ಣ ಅವರು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಲು ಅಲ್ಲೊಬ್ಬ ನಾಯಕ ಇಲ್ಲೊಬ್ಬ ನಾಯಕ ಕಾಂಗ್ರೆಸ್ ನಾಯಕರನ್ನ ಭೇಟಿಯಾಗಿ ಅವರ ಬೆಳೆ ಬೇಯಿಸಿಕೊಂಡರು. ಆದರೆ ಇವತ್ತು ಅವರಿಗೆ ಕಾರ್ಯಕರ್ತರು ನೆನಪಾಗಿದ್ದಾರೆ. ಕ್ಷೇತ್ರದಲ್ಲಿ ನಾಮ ನಿರ್ದೇಶನ ಮಾಡಲಿಲ್ಲ ಉಸ್ತುವಾರಿ ಸಚಿವರು ಎಂದು ಹೇಳುತ್ತಾರೆ. ನಾಮನಿರ್ದೇಶನ ಮಾಡುವುದು ಜನಪ್ರತಿನಿಧಿಗಳ ಅಥವಾ ಸಚಿವರು ಮಾಡಬೇಕಾ. ಚುನಾವಣೆ ಮುಗಿದ ನಂತರ ಪುಟ್ಟು ಆಂಜಿನಪ್ಪ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಕಾಂಗ್ರೆಸ್ ಪಕ್ಷದಲ್ಲಿ ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಸುತ್ತಿದ್ದಾರೆ ಅವರ ಇಬ್ಬರು ಕುಳಿತು ಒಂದು ನಿರ್ಧಾರಕ್ಕೆ ಬಂದು ನಮಗೆ ಇಂತಹ ವ್ಯಕ್ತಿ ನಾಮನಿರ್ದೇಶನ ಬೇಕು ಎಂದು ಜಿಲ್ಲಾ ಉಸ್ತುವಾರಿಗಳನ್ನ ಕೇಳಿದ್ದರೆ ಅವರು ಇಲ್ಲ ಎನ್ನುತ್ತಿದ್ದರೆ ನಾಗರಾಜಣ್ಣವರೇ. ಆ ಕೆಲಸ ಮಾಡಿ ನಾಗರಾಜಣ್ಣವರೇ. ನಮ್ಮನೆಗೆ ಮೂರು ಬಾಗಿಲಾಗಿದೆ. ಉಸ್ತುವಾರಿ ಸಚಿವರು ಹೇಳಿದರೆ ಅವರಿಗೆ ಏನು ಮಾಡುವವರು. ಸಚಿವರ ಅಭಿವೃದ್ಧಿ ಅವ್ರ್ ಮಾಡ್ತಾ ಇದ್ದಾರೆ ಯಾವುದೇ ಕೆಲಸ ನಿಲ್ಲಿಸಿಲ್ಲ. ಉಸ್ತುವಾರಿ ಸಚಿವರೇನು ನಿಮ್ಮ ಹಾಗೆ ಹಿಂಭಾಗಲಿನಿಂದ ರಾಜಕಾರಣ ಮಾಡುತ್ತಿಲ್ಲ. ನಗರಸಭೆ ಚುನಾವಣೆಯಲ್ಲಿ ಏನು ಮಾಡಿದ್ದೀರಿ ನಿಮ್ಮ ಗ್ರಾಮದಲ್ಲಿ ಡೈರಿ ಚುನಾವಣೆಯಲ್ಲಿ ನೀವು ಏನು ಮಾಡಿದ್ದೀರಿ ಕಾಂಗ್ರೆಸ್ ಪಕ್ಷದವರನ್ನ ಪಕ್ಕಕ್ಕೆ ಇಟ್ಟು ಜೆಡಿಎಸ್ ಪಕ್ಷದವರ ಜೊತೆ ಸೇರಿ ನಿರ್ದೇಶಕ ರಾಗಿದ್ದೀರಿ ಬೇರೆಯವರನ್ನ ಯಾಕೆ ದಾರಿ ತಪ್ಪಿಸುತ್ತೀರಿ ಪಕ್ಷದ ಮೇಲೆ ಅಭಿಪ್ರಾಯ ಇರಲಿ ಒಪ್ಪಿಕೊಳ್ಳೋಣ ಸೇರಿಸಿ ಎಲ್ಲರನ್ನು ಒಂದು ಕಡೆ ಸೇರಿಸುವ ಪ್ರಯತ್ನ ಮಾಡಿ. ಪಾರ್ಟಿ ಉಳಿಯಬೇಕಾದರೆ ನಾಳೆ ಎಲ್ಲರನ್ನು ಸೇರಿಸಿ ಪುಟ್ಟು ಆಂಜಿನಪ್ಪ ಅವರನ್ನು ಸೇರಿಸಿ ರಾಜೀವ್ ಗೌಡ ಅವರನ್ನು ಸೇರಿಸಿ ಎಲ್ಲ ಕಾರ್ಯಕರ್ತರನ್ನು ಸೇರಿಸಿ ಎಂದರು. ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರುತ್ತಿದ್ದು ಎಲ್ಲರನ್ನ ಒಗ್ಗೂಡಿಸಿ ಚುನಾವಣೆ ಮಾಡಿ ಒಂದು ವೇಳೆ ಈ ರೀತಿ ಗುಂಪುಗಾರಿಕೆ ಮಾಡಿದರೆ ಒಂದು ಸ್ಥಾನ ಗೆಲ್ಲುವುದಕ್ಕೆ ಕಷ್ಟವಾಗುತ್ತದೆ ಎಂದರು.
ಯುವ ಮುಖಂಡ ಹೆಚ್.ಕೆ ಸಂತೋಷ್ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡಾಂಗಣಗಳ ವಿಚಾರವಾಗಿ ಕಳೆದ ಹತ್ತು ದಿನಗಳ ಹಿಂದೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನ ಕರೆದು ಕ್ರೀಡಾಂಗಣಗಳ ಅಭಿವೃದ್ಧಿ ಬಗ್ಗೆ ಈಗಾಗಲೇ ಯೋಚಿಸಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಯಾವ ತಾಲೂಕಿನ ಕ್ರೀಡಾಂಗಣ ಅಭಿವೃದ್ಧಿ ಕುಂಠಿತಗೊಂಡಿದೆ
ಅಂತಹ ಕ್ರೀಡಾಂಗಣಗಳನ್ನು ಪಟ್ಟಿ ಮಾಡಿ ಅದಕ್ಕೆ ಬೇಕಾಗುವ ಡಿಪಿಆರ್ ಸಿದ್ಧತೆ ಮಾಡಿಕೊಂಡು ಬನ್ನಿ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ. ಅದಕ್ಕಾಗಿ 70 ಕೋಟಿ ಅನುದಾನವನ್ನ ಡಿಪಿಆರ್ ಮಾಡಿಸಿದ್ದಾರೆ. ಅದರಲ್ಲಿ ನಮ್ಮ ತಾಲೂಕಿನ ಕ್ರೀಡಾಂಗಣವು ಸಹ ಸೇರಿದೆ. ಅವರ ಸ್ವಂತ ಅನುದಾನವನ್ನು ನಾಲ್ಕು ಕೋಟಿ ನೀಡಿದ್ದು ಅದರ ಭೂಮಿ ಪೂಜೆಗೆ ಸಚಿವರ ಜೊತೆಯಲ್ಲಿ ನೀವು ಸಹ ಆಗಮಿಸಿದ್ದೀರಿ. ಇನ್ನು ಆಸ್ಪತ್ರೆಯ ಗುದ್ದಲಿ ಪೂಜೆಗೆ ಮತ್ತು ಹೈಟೆಕ್ ರೇಷ್ಮೆ ಮಾರುಕಟ್ಟೆಗೂ ಸಹ ಹೆಚ್ಚಿನ ಅನುದಾನವನ್ನ ಕೊಡಿಸಿರುತ್ತಾರೆ. ಅಮರಾವತಿ ಕ್ಯಾಂಪಸ್ ಗೆ ಎರಡನೇ ಹಂತವಾಗಿ133 ಕೋಟಿ ಬಜೆಟ್ ನಲ್ಲಿ ಮಂಡನೆ ಮಾಡಿಸಿದ್ದಾರೆ. ಇತರೆ ಹಲವು ಯೋಜನೆಗಳಿಗೆ ಅವರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಎಸ್.ಬಿ ಬಸವರಾಜ್ ಮಾತನಾಡಿ, ನಾಗರಾಜಣ್ಣ ಹಿಂದುಳಿದ ವರ್ಗದವರಿಗೆ ಏನು ಮಾನ್ಯತೆ ನೀಡಿದ್ದಾರೆ ಎಂದು ಕೇಳಿದ್ದೀರಿ. ಎಲ್ಲಾ ಮುಂದುವರೆದವರೆ ಇದ್ದರೂ, ಆದರೂ ಎಸ್ ಎಫ್ ಸಿ ಎಸ್ ಮತ್ತು ಡೈರಿಗಳಲ್ಲಿ ಎರಡು ಬಾರಿಯೂ ಹಿಂದುಳಿದ ವರ್ಗದವರಿಗೆ ಅಧಿಕಾರವನ್ನು ನೀಡಿದ್ದೇವೆ. ಮೊದಲನೇ ಬಾರಿಯೂ ನೀವೇ ಈ ಬಾರಿಯೂ ಹಿಂದುಳಿದ ವರ್ಗದವರೇ ಇದ್ದಾರೆ. ಸುಬ್ರಮಣಿಯವರಿಗೆ ಜಿಲ್ಲಾ ಪರಿಷತ್ ಸದಸ್ಯರಾಗಿ ನಂತರ ಅಧ್ಯಕ್ಷರನ್ನಾಗಿ ಮಾಡಲಿಲ್ಲವೇ, ಹಾಗೆಯೇ ನಮ್ಮ ನಿರಂಜನ್ ಸ್ವಾಮಿ ಅವರನ್ನು ಗೆಲ್ಲಿಸಿಲಿಲ್ಲವೇ, ಪಿಎಲ್‌ಡಿ ಬ್ಯಾಂಕ್ ನಲ್ಲಿ ಸಾಮಾನ್ಯ ಅಭ್ಯರ್ಥಿಯಾಗಿ ಡಿವಿ ವೆಂಕಟೇಶ್ ಅವರನ್ನ ಗೆಲ್ಲಿಸಿ ಕಳಿಸಿಕೊಡಲಿಲ್ಲವೇ. ಇಷ್ಟೆಲ್ಲಾ ಗೆಲ್ಲಿಸಿಕೊಟ್ಟಿದ್ದರು ಹಿಂದುಳಿದವರ ವರ್ಗದವರಿಗೆ ಏನು ಕೊಟ್ಟಿದ್ದೀರಿ ಎಂದು ಮಾತನಾಡುತ್ತೀರಿ ಅಲ್ಲವೇ. ಎಲ್ಲವೂ ಅವರಿಗೆ ನೀಡಿದ್ದೇವೆ ನಮ್ಮಲ್ಲಿ ಇರಲಿಲ್ಲವೇ ಆದರೂ ಅವರಿಗೆ ಹೆಚ್ಚು ಮಾನ್ಯತೆ ನೀಡಿದ್ದೇವೆ. ಅದು ನಮ್ಮ ಪಾರ್ಟಿ ನಮ್ಮವರೇ ಎಂದು ಅವರಿಗೆ ನಾವು ನೀಡಿದ್ದೇವೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೀವು ಜಿಲ್ಲಾ ವ್ಯಕ್ತಿಗಳನ್ನು ಸೂಚಿಸಿದ್ದೀರಿ, ಯಾಕೆ ನಮ್ಮ ಕ್ಷೇತ್ರದಲ್ಲಿ ಶಶಿಧರ್ ಮುನಿಯಪ್ಪ ಅವರು ಸಮಾಜ ಸೇವಕರು ಅಲ್ಲವೇ, ಅವರು ಅಭ್ಯರ್ಥಿ ಸ್ಥಾನದಲ್ಲಿ ಇದ್ದಾರೆ ಅವರನ್ನು ಸೂಚಿಸಬಹುದಲ್ಲವೇ, ನಮ್ಮ ತಾಲೂಕು ಶಶಿಧರ್ ಮುನಿಯಪ್ಪ ಅವರನ್ನು ಜಿಲ್ಲಾಧ್ಯಕ್ಷರನ್ನು ಮಾಡಿ ಎಂದು ಕೇಳಲಿ, ಮಾಜಿ ಶಾಸಕರು ಮಾಜಿ ಸಚಿವರು ಅವರು 35 ವರ್ಷಗಳ ಕಾಲ ಸುದೀರ್ಘ ರಾಜಕೀಯ ಸೇವೆಯಲ್ಲಿ ತೊಡಗಿದ್ದ ವ್ಯಕ್ತಿ ಅವರ ಮಗ ಶಶಿಧರ್ ಮುನಿಯಪ್ಪ ಅವರು ವಿದ್ಯಾವಂತರು ಅವರಿಗಾಗಿ ಇವರು ಟಿಕೆಟ್ ಕೇಳಲಿ. ಅದನ್ನು ಬಿಟ್ಟು ಯಾರೋ ಚಿಕ್ಕಬಳ್ಳಾಪುರಕ್ಕೆ ನೀಡಿ ಅಂತ ಕೇಳಿದ್ರಲ್ಲ ಇದು ತಪ್ಪಲ್ವಾ. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಇಲ್ಲಿಯವರೆಗೂ ನಮ್ಮ ತಾಲೂಕಿನಿಂದ ಯಾರು ಆಗಿಲ್ಲ ಯಾಕೆ ಮುನಿಯಪ್ಪ ಅವರಿಗೆ ಬೆಂಬಲ ನೀಡಬಾರದು. ನೀವು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಬೇಕಾದರೆ ಆಗ ನಿಮಗೆ ಒಂದು ಮಾತು ಸಚಿವರು ಬೇಡ ಅಂದಿದ್ದರೆ ನೀವು ನಿರ್ದೇಶಕರಾಗುತ್ತಿದ್ದೀರಾ! ಯಾರ ಮಾತನ್ನು ಕೇಳದೆ ಅವರು ನೇರವಾಗಿ ನಿಮ್ಮನ್ನೇ ಅವರು ಸರಿ ಎಂದು ನಿಮಗೆ ಬೆಂಬಲ ನೀಡಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದರು. ಕ್ಷೇತ್ರದಲ್ಲಿ ಎರಡು ಬಣ ಇದೆ ನಿಜ ಆದರೆ ಸೇರಿಸಿ ಎಲ್ಲರನ್ನೂ ಒಗ್ಗಟ್ಟಿಗೆ ಸೇರಿಸಿ ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೆ ಟಿಕೆಟ್ ಕೊಡುತ್ತಾರೋ ನಾವು ಅವರಿಗೆ ಬೆಂಬಲ ನೀಡುತ್ತೇವೆ. ಪಾರ್ಟಿ ಚಿನ್ನೆ ತಗೊಂಡು ಬಂದು ಯಾರನ್ನಾದರೂ ನಿಲ್ಲಿಸಲಿ ನಾವು ಅವರಿಗೆ ದುಡಿಯುತ್ತೇವೆ. ನಾಗರಾಜಣ್ಣ ನೀವು ಪತ್ರಿಕಾಗೋಷ್ಠಿ ನಡೆಸಬೇಕಾದರೆ ಕೇವಲ ನಾಲ್ಕು ಜನ ಹಿಂದೆ ಇಟ್ಕೊಂಡು ಪತ್ರಿಕಾಗೋಷ್ಠಿ ನಡೆಸಬೇಡಿ ನಮ್ಮನ್ನ ಕರೆಯಿರಿ ನಾವು ಬಂದು ಸಹಕರಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದೇವರಾಜ್ ಕೆ, ಮಾಜಿ ಗ್ರಾಪಂ ಅಧ್ಯಕ್ಷ ಹೆಚ್ ಎಂ ಕ್ಯಾತಪ್ಪ, ಎಸ್ ಎಫ್ ಸಿಎಸ್ ಅಧ್ಯಕ್ಷ ವಿ ಬಸವರಾಜ್, ಗ್ರಾಪ ಅಧ್ಯಕ್ಷ ಜಿ ಎಂ ಮುರಳಿ, ಮಾಜಿ ಗ್ರಾ ಪ ಅಧ್ಯಕ್ಷ ಜಿ ಕೆ ಮಂಜುನಾಥ್, ಮಾಜಿ ಗ್ರಾ ಪಂ ಅಧ್ಯಕ್ಷ ಶೀಗೆಹಳ್ಳಿ ರಾಮರೆಡ್ಡಿ , ರಾಕೇಶ್,ಚಂದ್ರಶೇಖರ,ವೆಂಕಟೇಶ್ ಹುಣಸೇನಹಳ್ಳಿ, ಶೀಗೆಹಳ್ಳಿ ದ್ಯಾವಪ್ಪ ಸೇರಿದಂತೆ ಮತ್ತಿತರರು ಇದ್ದರು.
VK NEWS – TODAY’S HEADLINES: