ತುರ್ತು ಪರಿಸ್ಧಿತಯ ಕರಾಳ ದಿನಗಳ ಸ್ನರಣೆ- ದಿ ಎಮೆರ್ಜೆನ್ಸಿ ಡೈರೀಸ್ ಕೃತಿ ಬಿಡುಗಡೆ ಮಾಡಲಿರುವ ಅಮಿತ್ ಶಾ!
ನವದೆಹಲಿ: ಇಂದಿರಾ ಗಾಂಧಿ ಅವರ ಆಡಳಿತದಲ್ಲಿ ಘೋಷಿಸಲಾಗಿದ್ದ ತುರ್ತು ಪರಿಸ್ಧಿತಿಗೆ ಇಂದು 50 ವರ್ಷ, ಈ ದಿನವನ್ನು ದೇಶ ಕಂಡ ಕರಾಳ ಇತಿಹಾಸ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ, ತುರ್ತು ಪರಿಸ್ಧಿತಿ ಘೋಷಿಸಿ ಇಂದಿಗೆ 50 ವರ್ಷ ಆಗಿರುವ ಹಿನ್ನೆಲೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಿ ಎಮರ್ಜೆನ್ಸಿ ಡೈರೀಸ್-ಇಯರ್ಸ್ ದಟ್ ಫೋಜ್ರ್ಡ್ ಎ ಲೀಡರ್ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ,
1975 ರ ಜೂನ್ 25 ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಆಘಾತಕಾರಿ ತುರ್ತು ಪರಿಸ್ಧಿತಿಯನ್ನು ಘೋಷಣೆ ಮಾಡಿದ್ದರು, ಅದು ನಾಗರಿಕ ಸ್ವಾತಂತ್ರ್ಯಗಳನ್ನು ಸ್ಧಗಿತಗೊಳಿಸಲಾಯಿತು, ಪತ್ರಿಕಾ ಸೆನ್ಸಾರ್ ಮಾಡಲಾಯಿತು ಮತ್ತು ರಾಜಕೀಯ ವಿರೋಧಿಗಳನ್ನು ಸಾಮೂಹಿಕವಾಗಿ ಬಂಧಿಸಲಾಯಿತು, ಭಾರತವು ರಾತ್ರೋ ರಾತ್ರಿ ಪೊಲೀಸ್ ರಾಜ್ಯವಾಗಿ ರೂಪಾಂತರಗೊಂಡಿತು, ಭಯ ಮತ್ತು ಅನಿಶ್ಚಿತತೆಯಿಂದ ಆವೃತವಾಗಿತ್ತು,
ಈ ಪುಸ್ತಕದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ವಿಶೇಷ ಮುನ್ನುಡಿಯಿದೆ, ಈ ಪುಸ್ತಕವು ಅಂದು ತುರ್ತು ಪರಿಸ್ದಿತಿಯ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದ ಹಾಘೂ ಯುವ ಆರ್‍ಎಸ್‍ಎಸ್ ಪ್ರಚಾರಕರಾಗಿದ್ದ ಪ್ರಧಾನಿ ನರೇಂದ್ರ ಮೋದಿ ವಹಿಸಿದ ಪ್ರಭಾವಶಾಲಿ ಪಾತ್ರವನ್ನು ತಿಳಿಸುತ್ತದೆ, ಈಶಾನ್ಯ ಭಾರತದಲ್ಲಿ ತುರ್ತು ಪರಿಸ್ಧಿತಿಗೆ ಆರ್‍ಎಸ್‍ಎಸ್ ನ ಪ್ರತಿರೋಧದ ಹೇಳಲಾಗದ ಕಥೆಯನ್ನು ವಿವರಿಸುತ್ತದೆ, 
ವೀ ಕೇ ನ್ಯೂಸ್25/06/2025
posted on




















