Live Stream

[ytplayer id=’22727′]

| Latest Version 8.0.1 |

Feature ArticleState News

ಹೆಬ್ಬಾಳ ಫ್ಲೈಓವರ್  ಮೇಲೆ ರಸ್ತೆ ಕಾಮಗಾರಿ ಹಿನ್ನೆಲೆ ಮೇಲ್ಸೇತುವೆ ಸಂಚಾರ ಬಂದ್

ಹೆಬ್ಬಾಳ ಫ್ಲೈಓವರ್  ಮೇಲೆ ರಸ್ತೆ ಕಾಮಗಾರಿ ಹಿನ್ನೆಲೆ ಮೇಲ್ಸೇತುವೆ ಸಂಚಾರ ಬಂದ್

ಬೆಂಗಳೂರು: ಹೆಬ್ಬಾಳ ಫ್ಲೈಓವರ್  ಮೇಲೆ ರಸ್ತೆ ಕಾಮಗಾರಿ ಹಿನ್ನೆಲೆ ಬೆಂಗಳೂರು ಏರ್​ಪೋರ್ಟ್​  ಹಾಗೂ ಬೆಂಗಳೂರು ನಗರಕ್ಕೆ  ಸಂಪರ್ಕಿಸುವ ರಸ್ತೆ ಮಾರ್ಗ ಬಂದ್ ಆಗಲಿದೆ. ಇಂದಿನಿಂದ ಎರಡು ದಿನಗಳ ಕಾಲ ರಾತ್ರಿ 11.30 ರಿಂದ ಬೆಳಗ್ಗೆ 5 ಗಂಟೆಯವರೆಗೆ ಹೆಬ್ಬಾಳದ ಮೇಲ್ಸೇತುವೆ ಸಂಚಾರ ಬಂದ್ ಆಗಲಿದೆ. ಬದಲಿ ವ್ಯವಸ್ಥೆ ಬಗ್ಗೆ ಸಂಚಾರಿ ಪೊಲೀಸರು ಮಾಹಿತಿ  ನೀಡಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.

ಬಿಬಿಎಂಪಿ ವತಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿನ ನಗರದ ಕಡೆಗೆ ಬರುವ ಮಾರ್ಗದಲ್ಲಿ ಡಾಂಬರೀಕರಣ ಕೆಲಸ ನಡೆಯಲಿದೆ. ಈ ಹಿನ್ನೆಲೆ ಹೆಬ್ಬಾಳ ಫ್ಲೈಓವರ್​ ಬಂದ್ ಆಗಲಿದೆ. ಜೂನ್​ 20 ಹಾಗೂ 21ರ ರಾತ್ರಿ ವೇಳೆ 11:30ರಿಂ ಬೆಳಗಿನ ಜಾವ 5 ಗಂಟೆವರೆಗೂ ಸಂಚಾರ ನಿರ್ಬಂಧಿಸಲಾಗಿದೆ.

ಯಲಹಂಕ ಹಾಗೂ ಬೆಂಗಳೂರು ಏಪೋರ್ಟ್​ ರಸ್ತೆಗಳಲ್ಲಿ ಬರುವ ಪ್ರಯಾಣಿಕರು ಹೆಬ್ಬಾಳ ಮೇಲ್ಸೇತುವೆ ಕೆಳಗಿನ ಸರ್ವೀಸ್ ರಸ್ತೆ ಬಳಸಬಹುದಾಗಿದೆ. ಹೆಬ್ಬಾಳ ಸರ್ಕಲ್‌ನಲ್ಲಿ ಬಲ ತಿರುವು ಪಡೆದು ಬಳಿಕ ತುಮಕೂರು ಕಡೆ ಹೊರ ವರ್ತುಲ ರಸ್ತೆ ಮುಖಾಂತರ ಸಾಗಿ ಕುವೆಂಪು ಸರ್ಕಲ್‌ನಲ್ಲಿ ಎಡ ತಿರುವು ಪಡೆದುಕೊಳ್ಳಬೇಕು. ನ್ಯೂ ಬಿಇಎಲ್ ರಸ್ತೆ ಮೂಲಕ ಸಾಗಿ ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಬಳಿಕ ಮೇಖ್ರಿ ಸರ್ಕಲ್ ತಲುಪಿ ಅಲ್ಲಿಂದ ಬೆಂಗಳೂರು ನಗರಕ್ಕೆ ತೆರಳಲು ಬದಲಿ ಮಾರ್ಗದ ಸೂಚನೆ ನೀಡಲಾಗಿದೆ.

ಸದ್ಯ ಏಪೋರ್ಟ್​ ರಸ್ತೆಗಳಲ್ಲಿ ಮೂರು ಕಿಲೋ ಮೀಟರ್‌ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನೆರಡು ದಿನ ಹೆಬ್ಬಾಳ ರಸ್ತೆಯಲ್ಲಿ ಮೂಲಕ ಓಡಾಡುವವರಿಗೆ ಟ್ರಾಫಿಕ್ ತಲೆ ಬಿಸಿ ಮತ್ತಷ್ಟು ಹೆಚ್ಚಲಿದೆ. ವೀಕೆಂಡ್​ ಹಿನ್ನೆಲೆ ಹೆಚ್ಚು ಜನರು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ.

ವೀ ಕೇ ನ್ಯೂಸ್
";