ಪರಸ್ಪರ ಹೋಳಿಗೆ, ಸಮೋಸ, ಖರ್ಜೂರ, ಹಣ್ಣುಗಳ ವಿನಿಮಯ "ಉಗಾದಿ-ರಂಚಾನ್‌ ಸೌಹಾರ್ದ ಸಂಭ್ರಮ'- ಆಚರಣೆ

VK NEWS
By -
0

ಉಗಾದಿ ಮತ್ತು ರಂಜಾನ್‌ ಸೌಹಾರ್ದ ಸಂಭ್ರಮವನ್ನು ಮಾರ್ಚ್‌ 30 ರಂದು ಲಾಲ್‌ ಬಾಗ್‌ ಪಶ್ಚಿಮ ದ್ವಾರದ ರಾಷ್ಟ್ರಕವಿ ಕುವೆಂಪುರವರ ಪುತ್ತಳಿಯ ಮುಂದೆ ಆಚರಿಸಲಾಯಿತು. ಸೌಹಾರ್ದ ಕರ್ನಾಟಕದ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಸಂಘಟಿಸಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಜನತೆ ಮತ್ತು ವಿವಿಧ ನೆಲೆಯ ಗಣ್ಯರು ಮೊದಲಿಗೆ ಕುವೆಂಪುರವರ ಪುತ್ತಳಿಗೆ ಗೌರವನಮನ ಸಲ್ಲಿಸಿದರು. ದೇಶದ ಸೌಹಾರ್ದ ಪರಂಪರೆ ನಮ್ಮ ಹೆಮ್ಮೆ ಬಹುಸಂಸ್ಕೃತಿಯ ಭಾರತವನು ರಕ್ಷಿಸುತ್ತೇವೆ. ಅದನ್ನು
ನಾಶಮಾಡಲು ಬಿಡುವುದಿವಿಲ್ಲ. ಹಬ್ಬಗಳು ಎಲ್ಲ ಜನತೆಯ ನೋವು ನಲಿವುಗಳನ್ನು ಹಂಚಿಕೊಡು ಭಾವ್ಯಕ್ಯತೆಯನ್ನು ಸಾರುತ್ತವೆ. ಈ ಉಗಾದಿ-ರಂಜಾನ್‌ ಎರಡೂ ಹಬ್ಬಗಳು ಒಟ್ಟಗೆ ಬಂದು ಸೌಹಾರ್ದತೆಯನ್ನು ಸಾರಿವೆ ಎಂದು ಹೇಳಿದರು.

ಈ ಸೌಹಾರ್ದ ಸಂಭ್ರಮದ ಸಭೆಯನ್ನ ಉದ್ದೇಶಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ದ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್‌ರವರು ಮಾತನಾಡಿ, ಭಾರತ ಸಂವಿಧಾನದ ಸೌಹಾರ್ದತೆಯ ಆಶಯದಂತೆ ಬದುಕೋಣ ಎಂದರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್‌.ವಿಮಲಾವರು ಮಾತನಾಡಿ ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ, ಯಾವ ಮಗುವಿನ ಮನಸ್ಸಿನಲ್ಲಿಯೂ ಅದು ಹುಟ್ಟಿದಾಗ ದ್ವೇಷ ತಾರತಮ್ಯ ಮನೋಭಾವ ಇರುವುದಿಲ್ಲ. ಕುಟುಂಬ ಹಾಗು ಸಮಾಜದಿಂದ ಮಗುವು ಬೇಧಭಾವಗಳನ್ನು ಕಲಿಯುತ್ತದೆ. 
ನಾವು ಎಲ್ಲ ಮಕ್ಕಳಿಗೆ ಸೌಹಾರ್ದತೆ, ವಿಶ್ವ ಮಾನವತ್ವವನ್ನು ಕಲಿಸೋಣ ಎಂದರು. ಅಖಿಲ ಭಾರತ ಮಿಲ್ಲಿ ಕೌನ್ಸಿಲ್‌ ಕಾರ್ಯದರ್ಶಿಗಳಾದ ಶಪೀವುಲ್ಲಾ ಸಾಹೇಬ್‌ರವರು, ಹೊಂಬೇಗೌಡ ಶಾಲೆಯ ಕಾರ್ಯದರ್ಶಿಗಳಾದ ಜಗದೀಶ್‌ ರೆಡ್ಡಿಯವರು, ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಪಧಾನ ಕಾರ್ಯದರ್ಶಿಗಳಾದ ಎಣ್ಣೆಗೆರೆ ಆರ್‌. ವೆ೦ಕಟರಾಮಯ್ಯನವರು, ಡಿ.ಎಚ್‌.ಎ.ಎಸ್‌ ಮುಖಂಡರಾದ ಮಾವಳ್ಳಿ ಮುನಿಕೃಷ್ಣಾವರು, ಲಾಲ್‌ಬಾಗ್‌ ನಡಿಗೆದಾರರ ಸಂಘದ ಅಧ್ಯಕ್ಷರಾದ ಡಿ.ಆರ್‌ ಕೃಷ್ಣಾವರು, ಬೆ೦ಗಳೂರು ಮನೆಕೆಲಸಗಾರರ ಸಂಘದ ಮುಖಂಡರಾದ ಶಶಿಕಲಾರವರು ಮಾತನಾಡಿದರು .ಆರ್‌.ಬಿ.ಐ. ನಿವೃತ್ತ ಅಧಿಕಾರಗಳು ನೌಕಕರ ಸಂಘದ ಮಾಜಿ ಮುಖಂಡರಾದ ಶ್ರೀಪತಿಯವರು ಸ್ವಾಗತ ಕೋರಿದರು, ಅಧ್ಯಕ್ಷತೆಯನ್ನು ಸೌಹಾರ್ದ ಕರ್ನಾಟಕದ ಎ.ಎಂ ರವಿಚಂದ್ರನ್‌ ವಹಿಸಿದ್ದರು. “ಪ್ರೀತಿಯ ಗಾಳಿ ಬೀಸುತಿದೆ ಹಟ್ಟಿ-ಮೊಹಲ್ಲಾಗಳ ನಡುವೆ.” ಹಾಡನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್‌..ಲಕ್ಷ್ಮಿಯವರು ಮತ್ತು ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರಾದ ಮನೋವಾರವರು ಹಾಡಿದರು, ವಂದನಾರ್ಪಣೆಯನ್ನು ಸಿದ್ಧಾಪುರ ಬಾಲುವರು ಮಾಡಿದರು..
ಈ ಸಂದಭದಲ್ಲಿ ದೀಪದಿಂದ ದೀಪವನನ್ನು ಬೆಳಗಿಸಿ ಸೌಹಾರ್ದ ಸಂದೇಶವನ್ನು ಸಾರಲಾಯಿತು. ಸವಿರುಚಿಯ ಹೋಳಿಗೆ ,ಸಮೋಸ, ಖರ್ಜೂರ, ಹಣ್ಣುಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಎಲ್ಲರೂ ಸವಿಯುವ ಮೂಲಕ ಕಾರ್ಯಕ್ರಮವನ್ನು ನಡೆಸಲಾಯಿತು.

Post a Comment

0Comments

Post a Comment (0)