ವಿಪ್ರ ಸೇವಾ ಟ್ರಸ್ಟ್ ಯೆಲಹಂಕ ಉಪನಗರ ಇವರ ಸಂಯುಕ್ತ ಆಶ್ರಯದಲ್ಲಿ ಚುನಾವಣಾ ಪ್ರಚಾರ ಸಭೆ

VK NEWS
By -
0

ಆತ್ಮೀಯ ವಿಪ್ರ ಮತದಾರರಲ್ಲಿ,

ದಿನಾಂಕ 13 -4 - 2025ರ ಭಾನುವಾರ ನಡೆಯಲಿರುವ "ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷೀಯ ಹಾಗೂ ಜಿಲ್ಲಾ ಪ್ರತಿನಿಧಿಗಳ ಮಹಾ ಚುನಾವಣೆಯ" ಪ್ರಯುಕ್ತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶ್ರೀ ರಘುನಾಥ್ ಜಿ ರವರು ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನದ ಅಭ್ಯರ್ಥಿಗಳಾದ ಶ್ರೀ ಜಿ,ಎಸ್, ನಾಗೇಶ್ ಹಾಗೂ ಎ,ದಿಲೀಪ್ ಕುಮಾರ್ ಇವರುಗಳೊಂದಿಗೆ ಇತರ ವಿಪ್ರ ಮುಖಂಡರುಗಳು ಹಾಗೂ ಸ್ಥಳೀಯ ವಿಪ್ರ ಮುಖಂಡರುಗಳು ದಿನಾಂಕ 10.04.2025ರ ಗುರುವಾರ ಬೆಳಗ್ಗೆ 11 ಗಂಟೆಗೆ "ವಿಪ್ರ ಸೇವಾ ಟ್ರಸ್ಟ್" ನವರು ಆಯೋಜಿಸಿರುವ ಮತಯಾಚನೆ ಸಭೆಗೆ ಆಗಮಿಸುತ್ತಿದ್ದು ಚುನಾವಣಾ ಪೂರ್ವ ಸಭೆಯನ್ನು "ಲಯನ್ಸ್ ಸೇವಾ ಭವನ" ಸಭಾಂಗಣ ನಂಬರ್ ಡಿ 9, ಏ,ಸೆಕ್ಟರ್, ಎರಡನೇ ಮಹಡಿ,(ಶ್ರೀ ವೆಂಕಟೇಶ್ವರ ದೇವಸ್ಥಾನದ ಮುಂಭಾಗ), ಎನ್ ಈ ಎಸ್ ಸರ್ವಿಸ್ ರಸ್ತೆ,ಯಲಹಂಕ ಉಪನಗರ,ಬೆಂಗಳೂರು 560064.

ಇಲ್ಲಿ ಏರ್ಪಡಿಸಲಾಗಿದ್ದು ಮಾನ್ಯ ವಿಪ್ರಬಾಂಧವರು ತಮ್ಮ ಸಂಬಂಧಿಗಳು ಹಾಗೂ ಸ್ನೇಹಿತರೊಂದಿಗೆ ಆಗಮಿಸಿ ಅಭ್ಯರ್ಥಿಗಳಿಗೆ ತಮ್ಮಗಳ ಆಶೀರ್ವಾದ ಹಾಗೂ ಸಹಕಾರ ನೀಡಲು ಸಭೆಯಲ್ಲಿ ಭಾಗವಹಿಸುವುದರೊಂದಿಗೆ ತಮ್ಮ ಸಂಪೂರ್ಣ ಬೆಂಬ ಲವನ್ನು ಸೂಚಿಸಬೇಕೆಂದು ಈ ಮೂಲಕ ವಿಪ್ರ ಸೇವಾ ಟ್ರಸ್ಟ್  ಆಡಳಿತ ಮಂಡಳಿ ಆಡಳಿತ ಮಂಡಳಿ ಪ್ರಾರ್ಥಿಸುತ್ತಿದೆ. ವಂದನೆಗಳೊಂದಿಗೆ,

 ಇಂತಿ ತಮ್ಮ ವಿಶ್ವಾಸಿ,
 ಎ.ವಿ. ಲಕ್ಷ್ಮೀಶ,
 ಕಾರ್ಯದರ್ಶಿ.

Post a Comment

0Comments

Post a Comment (0)