ಬೆಂಗಳೂರು: ಕಳೆದ 12 ವರ್ಷಗಳಿಂದ ಅಂಧರಿಗೆ, ವೃದ್ದರಿಗೆ ಹಾಗೂ ದೀನ ದಲಿತರಿಗೆ ಬೆಂಬಲ ನೀಡುತ್ತಿರುವ ವಿಶ್ವಭಾರತಿ ಟ್ರಸ್ಟ್ ಈ ಬಾರಿ ಯುಗಾದಿ(2025) ಹಬ್ಬವನ್ನು ವಿಶೇಷವಾಗಿ ಆಚರಿಸಿದೆ. ಟ್ರಸ್ಟ್ನ ವತಿಯಿಂದ 100 ಕಿಟ್‌ಗಳ ಆಹಾರ ಕಿಟ್‌ಗಳನ್ನು ದೃಷ್ಟಿಹೀನರಿಗೆ ವಿತರಿಸಲಾಯಿತು.
ಟ್ರಸ್ಟ್ ಕಳೆದ ದಶಕದ ಕಾಲದಿಂದ ಅಂಧ ಮಕ್ಕಳ ಶಿಕ್ಷಣ, ವೃತ್ತಿ ತರಬೇತಿ, ಪುನರ್ವಸತಿ ಮತ್ತು ಆದಾಯೋತ್ಪಾದಕ ಚಟುವಟಿಕೆಗಳಿಗೆ ಸಹಾಯ ಮಾಡುತ್ತಾ ಬಂದಿದೆ, ಅಲ್ಪ ಸಂಪತ್ತಿನ ವಿದ್ಯಾರ್ಥಿಗಳಿಗೆ ಶಾಲಾ ಉಪಕರಣಗಳು, ವೃದ್ದರಿಗೆ ಆರೈಕೆ ಮತ್ತು ಅಗತ್ಯ ವೈದ್ಯಕೀಯ ನೆರವು ಹಾಗೂ ವಿಶೇಷವಾಗಿ ಅಂಧರಿಗಾಗಿ ಬ್ರೇಲ್ ಗ್ರಂಥಾಲಯ, ವೃತ್ತಿ ತರಬೇತಿ ಕೇಂದ್ರ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ.
ಟ್ರಸ್ಟ್ನ ಮುಖ್ಯ ಉದ್ದೇಶ: ದೃಷ್ಟಿಹೀನರು ಸ್ವಾವಲಂಬಿಯಾಗಿ ಬದುಕಲು ಸಹಾಯ ಮಾಡುವುದು. ಕೀಳು ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸುವುದು. ವೃದ್ದರಿಗೆ, ಅನಾಥರಿಗೆ ಮತ್ತು ನಿರಾಶ್ರಿತರಿಗೆ ಸಹಾಯ ಮಾಡುವುದು. ವಿಶ್ವ ಭಾರತಿ ಟ್ರಸ್ಟ್ ಸದ್ಯದಲ್ಲೆ ಹೆಚ್ಚಿನ ಅಗತ್ಯ ಸೇವೆಗಳನ್ನು ವಿಸ್ತರಿಸಲು ಯೋಜನೆ ರೂಪಿಸುತ್ತಿದೆ. ಸಮಾಜದ ಎಲ್ಲ ವರ್ಗಗಳ ಸಹಾಯದಿಂದ ಈ ಸೇವಾ ಕಾರ್ಯ ಮುಂದುವರೆಯಲಿದೆ. ಎಂದು ಟ್ರಸ್ಟ್ನ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.