ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರ, ಕೇರಳದಲ್ಲಿ ಮೋದಿಗೆ ಜೈಕಾರ

VK NEWS
By -
0

ಕೊಚ್ಚಿ:  ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರವಾದ ನಂತರ ಕೇರಳದ ಕ್ರಿಶ್ಚಿಯನ್ ಪರ ಪಕ್ಷಗಳು 'ಮೋದಿಗೆ ಜಯವಾಗಲಿ' ಎಂಬ ಘೋಷಣೆಗಳೊಂದಿಗೆ ಮುನಿಸಿಕೊಂಡವು.


ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರ, ಕೇರಳದಲ್ಲಿ ಮೋದಿಗೆ ಜೈಕಾರ ವ್ಯಕ್ತಪಡಿಸಿದರು. ಕೇರಳದ ಮುನಬಂ ಎಂಬ ಗ್ರಾಮದಲ್ಲಿ ಕಳೆದ 173 ದಿನಗಳಿಂದ ವಕ್ಫ್‌ ಮಂಡಳಿಯ ಭೂಮಿಕಬಳಿಕೆಗೆ ವಿರುದ್ಧವಾಗಿ ಹೋರಾಟ ನಡೆಸುತ್ತಿತ್ತು. ಈ ಹೋರಾಟವು ಮಂಗಳವಾರ ತಡರಾತ್ರಿ ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರಗೊಂಡ ನಂತರ ಈ ಹೋರಾಟಕ್ಕೆ ಜಯ ಸಿಕ್ಕಿದೆ. ಮಸೂದೆ ಅಂಗೀಕಾರದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ, “ನರೇಂದ್ರ ಮೋದಿ ಜಿಂದಾಬಾದ್” ಎಂಬ ಘೋಷಣೆ ಕೂಗಿ ತಮ್ಮ ಸಂತೋಷ ವ್ಯಕ್ತಪಡಿಸಿದರು.

ಮುನಬಂ ಗ್ರಾಮದಲ್ಲಿ ಸುಮಾರು 600ಕ್ಕೂ ಹೆಚ್ಚು ಕುಟುಂಬ ವಾಸವಿದ್ದು, ಹೆಚ್ಚಿನವರು ಮೀನುಗಾರಿಕೆ ಮತ್ತು ಕಿರು ವ್ಯಾಪಾರಗಳಲ್ಲಿ ದ್ದಾರೆ. ಇತ್ತೀಚೆಗೆ ವಕ್ಫ್‌ ಮಂಡಳಿ ನೋಂದಾಯಿತ ದಾಖಲೆಗಳಿರುವ ಭೂಮಿಗಳನ್ನು ವಕ್ಫ್ ಆಸ್ತಿಯಾಗಿ ಘೋಷಿಸಿ, ವಿವಿಧ ಕುಟುಂಬಗಳಿಗೆ ತೆರವು ನೋಟಿಸ್‌ಗಳನ್ನು ನೀಡಿತ್ತು.  ಗ್ರಾಮಸ್ಥರಲ್ಲಿ ಆತಂಕ ಮತ್ತು ಅಸಮಾಧಾನ ಮೂಡಿತ್ತು. ಈ ಅನ್ಯಾಯದ ವಿರುದ್ಧ ಸ್ಥಳೀಯರು ‘ಮುನಬಂ ಭೂ ಸಂರಕ್ಷಣಾ ಸಮಿತಿ’ ಎಂಬ ಹೆಸರಿನಲ್ಲಿ ಸಂಘಟಿತವಾಗಿ ಹೋರಾಟ ಆರಂಭಿಸಿದರು. ಗ್ರಾಮಸ್ಥರು ಶಾಂತಿಯುತವಾಗಿ, ಶಾಸ್ತ್ರೀಯ ಹಕ್ಕುಗಳನ್ನು ಪ್ರಸ್ತಾಪಿಸುತ್ತಾ ತಮ್ಮ ಭೂಮಿಗೆ ನ್ಯಾಯ ಬೇಕೆಂದು ಆಗ್ರಹಿಸಿದರು. 

ಹಲವು ಸಾರ್ವಜನಿಕ ಸಭೆಗಳು, ಧರಣಿಗಳು, ಪತ್ರಿಕಾ ಮೇಳಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಬಳಕೆ ಮೂಲಕ ತಮ್ಮ ಧ್ವನಿಯನ್ನು ಸರ್ಕಾರದ ಕಿವಿಗೆ ತಲುಪಿಸಿದರು. ಈ ಮಧ್ಯೆ ಕೇಂದ್ರ ಸರ್ಕಾರ ವಕ್ಫ್‌ ತಿದ್ದುಪಡಿ ಮಸೂದೆ ಸಿದ್ಧಪಡಿಸಿ, ಅದನ್ನು ಲೋಕಸಭೆಯಲ್ಲಿ ಮಂಡಿಸಿತು. ಮಸೂದೆಯು ಮಂಗಳವಾರ ತಡರಾತ್ರಿ ಅಂಗೀಕಾರಗೊಂಡಿದ್ದು, ಮುನಬಂ ಹೋರಾಟಗಾರರಿಗೆ ಬಹುದೊಡ್ಡ ಜಯವಾಗಿ ಪರಿಗಣಿಸಲಾಗಿದೆ. ಗುರುವಾರ ಮುನಬಂ ಗ್ರಾಮದ ನಿವಾಸಿಗಳನ್ನು ಭೇಟಿಯಾದ ಪ್ರಮುಖ ಬಿಜೆಪಿ ನಾಯಕರು, ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸಿದರು. ಮಾಜಿ ಕೇಂದ್ರ ಸಚಿವ ಹಾಗೂ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಬಿಜೆಪಿ ನಾಯಕ ಮುರುಳೀಧರನ್ ಸೇರಿದಂತೆ ಹಲವರು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಸ್ಥಳೀಯರು ಸರ್ಕಾರದ ಕ್ರಮವನ್ನು ಪ್ರಶಂಸಿಸಿ ಪ್ರಧಾನಿ ಮೋದಿಗೆ  ಧನ್ಯವಾದ ವ್ಯಕ್ತಪಡಿಸಿದರು.


Post a Comment

0Comments

Post a Comment (0)