“ಬಂಜಾರ ಸಾಂಸ್ಕೃತಿಕ ವಿಶ್ವಕೋಶ”ವನ್ನು ರಚಿಸಲು ವಿಶೇಷ ಅನುದಾನ ಕೋರಿ ಮನವಿ

VK NEWS
By -
0

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಕರ್ನಾಟಕ ಸರ್ಕಾರ, ಬೆಂಗಳೂರು ರವರ ಯೋಜನೆಯಂತೆ ಮತ್ತು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸಾಂಸ್ಕೃತಿಕ ವಿಶ್ವಕೋಶ ರಚನಾ  ಸಮಿತಿ ಸಲಹೆಯಂತೆ “ಬಂಜಾರ ಸಾಂಸ್ಕೃತಿಕ ವಿಶ್ವಕೋಶ”ವನ್ನು ರಚಿಸಲು ವಿಶೇಷ ಅನುದಾನ ಕೋರಿ ಕನ್ನಡ ಮತ್ತು   ಸಂಸ್ಕೃತಿ     ಇಲಾಖೆ   ಸಚಿವರಾದ  ಶ್ರೀ ಶಿವರಾಜ್‌ ಎಸ್ ತಂಗಡಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬಂಜಾರ ಅಕಾಡೆಮಿ ವತಿಯಿಂದ ʻಪ್ರಥಮ ಶ್ರೀ ಸಂತಸೇವಾಲಾಲ್‌ ಪ್ರಶಸ್ತಿ’ಯನ್ನು ಸ್ಥಾಪಿಸಿದಕ್ಕೆ ಸಮಸ್ತ ಬಂಜಾರ ಸಮುದಾಯದ ಪರವಾಗಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾದ ಡಾ. ಎ.ಆರ್.‌ ಗೋವಿಂದಸ್ವಾಮಿ ಅವರ ನೇತೃತ್ವದಲ್ಲಿ ಅಭಿನಂದಿಸಿ, ಮನವಿ ಸಲ್ಲಿಸಲಾಯಿತು. 

ಇದೇ ಸಂದರ್ಭದಲ್ಲಿ ವಿಶ್ವಕೋಶ ರಚನೆಗೆ ತಗಲುವ ಆರಂಭದ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಭರವಸೆ ನೀಡಿದರು. 

ನಿಯೋಗದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾದ ಡಾ. ಎ.ಆರ್.‌ ಗೋವಿಂದಸ್ವಾಮಿ,  ಹಿರಿಯ ಸಾಂಸ್ಕೃತಿಕ ಚಿಂತಕರು ಹಾಗೂ ಭಾಷಾ ತಜ್ಞರಾದ ಡಾ.ಹಂಪ.ನಾಗರಾಜಯ್ಯಬಂಜಾರ ಸಮುದಾಯದ ಹಿರಿಯ ಸಾಹಿತಿ, ಮಾಜಿ ಸಚಿವೆ ಹಾಗೂ ಶ್ರೀ ಸಂತ ಸೇವಾಲಾಲ್‌ ಪ್ರಶಸ್ತಿ ವಿಜೇತೆ ಡಾ. ಬಿ.ಟಿ. ಲಲಿತಾನಾಯಕ್‌, ಪರಿಸರ ತಜ್ಞ, ಡಾ. ಡಿ. ಪರಮೇಶ್‌ ನಾಯಕ್‌ ಮುಂತಾದವರು ಉಪಸ್ಥಿತರಿದ್ದರು.


Tags:

Post a Comment

0Comments

Post a Comment (0)