ಪ್ರವಚನ - ಗಾಯನ

VK NEWS
By -
0

ಬೆಂಗಳೂರು : ವಿದ್ಯಾರಣ್ಯಪುರದ ಶ್ರೀರಾಮ ಭಕ್ತ ಸಭಾ ವತಿಯಿಂದ 119ನೇ ವರ್ಷದ ಶ್ರೀ ರಾಮೋತ್ಸವವನ್ನು ಮಲ್ಲೇಶ್ವರದ 5ನೇ ಅಡ್ಡರಸ್ತೆಯಲ್ಲಿರುವ ಶ್ರೀ ಶ್ರೀಕಂಠೇಶ್ವರ ಭವನದಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 7ರ ವರೆಗೆ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಮಾರ್ಚ್ 31ರಂದು ಸಂಜೆಯ ಕಾರ್ಯಕ್ರಮದಲ್ಲಿ ಮ||ಶಾ||ಸಂ|| ಶ್ರೀ ಕಲ್ಲಾಪರ ಪವಮಾನಾಚಾರ್ಯರು "ನಳೋಪಾಖ್ಯಾನ" ವಿಷಯವಾಗಿ ಧಾರ್ಮಿಕ ಪ್ರವಚನ ನಡೆಸಿಕೊಟ್ಟರು.


ನಂತರ 'ಯುವ ಪ್ರತಿಭೆ' ವಿ|| ಕು|| ರಚನಾ ಶರ್ಮಾ ಸಂಗೀತ-ದಾಸವಾಣಿ ಪ್ರಸ್ತುತಪಡಿಸಿದರು. ಇವರ ಗಾಯನಕ್ಕೆ ವಿ|| ಸೀತಾರಾಮ್ ಗೋಪಿನಾಥ್ (ವಯೋಲಿನ್), ವಿ|| ಮುರಳಿ ನಾರಾಯಣರಾವ್ (ಮೃದಂಗ) ಮತ್ತು ವಿ|| ಸಚಿನ್ ದೇವಿಪ್ರಸಾದ್ (ಘಟ) ಪಕ್ಕವಾದ್ಯಗಳಲ್ಲಿ  ಸಾಥ್ ನೀಡಿದರು. ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು.

Post a Comment

0Comments

Post a Comment (0)