ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಿಂದ 2023-24ನೇ ಸಾಲಿನ ಎಸ್‍ಸಿಎಸ್‍ಪಿ / ಟಿಎಸ್‍ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅರ್ಹ ನಿರುದ್ಯೋಗಿ ಯುವಕ/ಯುವತಿಯರಿಗೆ ಉಚಿತವಾಗಿ ಊಟ-ಉಪಹಾರ ಹಾಗೂ ವಸತಿ ಸಹಿತ 30 ದಿನಗಳವರೆಗೆ ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿ ಹಮ್ಮಿಕೊಳ್ಳಲಾಗಿದೆ.
ತರಬೇತಿ ನಂತರ ಪರವಾನಿಗೆ ಪತ್ರದ ನೀಡಲಾಗುವುದು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸದಾಗಿ ನಿರ್ಮಾಣಗೊಂಡಿರುವ ಶಿಗ್ಗಾವ ತರಬೇತಿ ಕೇಂದ್ರ, ಗಂಗಿಭಾವಿ ರಸ್ತೆ, ಶಿಗ್ಗಾಂವ ಇಲ್ಲಿ ನೀಡಲಾಗುವುದು. ಅರ್ಹ ಫಲಾನುಭವಿಗಳು ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ತರಬೇತಿ ಕೇಂದ್ರದ ದೂರವಾಣಿ ಸಂಖ್ಯೆ: 8095161818 / 9449925367 / 9449971416 ನ್ನು ಸಂಪರ್ಕಿಸಬಹುದಾಗಿದೆ ಎಂದು ಹುಬ್ಬಳ್ಳಿ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಪ್ಲೊಮಾ ಟೆಕ್ಸ್‍ಟೈಲ್ ಟೆಕ್ನಾಲಜಿ ಕೋರ್ಸಿಗೆ ಅರ್ಜಿ ಆಹ್ವಾನ
ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆಯು 2025-26 ನೇ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಟೆಕ್ಸ್‍ಟೈಲ್ ಟೆಕ್ನಲಜಿ ಕೋರ್ಸಿಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾದ ನಂತರ ಅರ್ಜಿಗಳನ್ನು ಆಹ್ವಾನಿಸಲಾಗುವುದು.
ಈ ಡಿಪ್ಲೊಮಾ ಕೋರ್ಸ್ 3 ವರ್ಷದ ಅವಧಿಯದ್ದಾಗಿದ್ದು. ಬೆಂಗಳೂರು ಕೆ.ಆರ್.ಸರ್ಕಲ್‍ನಲ್ಲಿರುವ ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆಯಲ್ಲಿ ಪ್ರವೇಶ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಾಲತಾಣ https://gpt.karnataka.gov.in/
ಲಘು/ಭಾರಿ ವಾಹನ ಚಾಲನಾ ತರಬೇತಿ - ಡಿಪ್ಲೊಮಾ ಟೆಕ್ಸ್‍ಟೈಲ್ ಟೆಕ್ನಾಲಜಿ ಕೋರ್ಸಿಗೆ ಅರ್ಜಿ ಆಹ್ವಾನ
By -
March 27, 2025
0