ಆಂಧ್ರ ಪ್ರದೇಶದ ಪುಣ್ಗನೂರು ಜಮೀನುದಾರರ ಆಳ್ವಿಕೆ ಇದ್ದಂತಹ ಪ್ರದೇಶ.ಅಲ್ಲಿ ಒಂದು ಸುಂದರವಾದ ಪುಷ್ಕರಿಣಿ ಇದೆ.ಅದರ ಬಗ್ಗೆ ಅನೇಕ ದಂತ ಕಥೆಗಳಿವೆ.
ಅದನ್ನು ಪುಂಗನೂರಿನ ಒಬ್ಬ ಜಮೀನುದಾರ ಕಟ್ಟಿಸಿದನಂತೆ.ಅದನ್ನು ಕಲ್ಲಿನಲ್ಲಿ ಕೆತ್ತಿ ಕಟ್ಟಿದ ಶಿಲ್ಪಿಯನ್ನು, ಪ್ರಧಾನನನ್ನು ಕಟ್ಟಡದ ಕೆಲಸ ಮುಗಿದ ಮೇಲೆ ಕೊಲ್ಲಲಾಯಿತಂತೆ.
ಇದು ನಮ್ಮ ಹಳೆಬೀಡು ಬೇಲೂರಿನ ಜಕನಾಚಾರ್ಯನ ಕಥೆ ನೆನಪಿಗೆ ತರಿಸುತ್ತದೆ.
ಬಹುಶಃ ಹಿಂದಿನ ರಾಜರು ,ಸಾಮಂತರು ಹಾಗು ಇತರರು ತಾವು ಯಾವುದಾದರೂ ಕಲ್ಲಿನ ಕಟ್ಟಡ ಕೆತ್ತನೆ ಮಾಡಿ ಕಟ್ಟಿಸಿದರೆ, ಅದೇ ಮಾದರಿ ಕಟ್ಟಡ ಮತ್ತೆ ಪುನರಾವರ್ತನೆ ಆಗದಿರಲಿ ಎಂದೂ ಏನೋ ಪ್ರದಾನ ಶಿಲ್ಪಿಗಳನ್ನು ಕೊಲ್ಲೂತ್ತಿದ್ದರು.
ಈ ಪುಷ್ಕರಿಣಿ ಬಗ್ಗೆ ಹೆಚ್ಚಿನ ಮಾಹಿತಿ ನಮಗೆ ತಿಳಿದು ಬಂದಿಲ್ಲ.ಸಂಶೋಧನೆ ಅಗತ್ಯವಾಗಿದೆ.
ಈಗ ಊರ ಜನರು ಪುಷ್ಕರಿಣಿ ತುಂಬಿದರೆ ಹಾಗು ಹಬ್ಬಗಳಲ್ಲಿ ಇಲ್ಲಿ ದೀಪೋತ್ಸವ ಆಚರಿಸುತ್ತಾರೆ.
ಒಮ್ಮೆ ಭೇಟಿ ಕೊಡಿ ಹಾಗು ಫೋಟೋ ತೆಗೆದುಕೊಳ್ಳಿ.
ರಾಧಿಕಾ ಜಿ.ಎನ್
ಟೀವೀ ಹೋಸ್ಟ್
brahmies@gmail.com