Big breaking News ಮಧ್ಯ ರಾತ್ರಿ ಆನೆ ದಾಳಿ: ವ್ಯಕ್ತಿ ಮೃತ

VK NEWS
By -
0

ಕನಕಪುರ: ಭಾನುವಾರ  ಸೂರ್ಯ ಹುಟ್ಟುವ ಮೊದಲೇ  ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಹೆಗ್ಗನೂರುದೊಡ್ಡಿ ಗ್ರಾಮದಲ್ಲಿ ಅನಿರೀಕ್ಷಿತ ಘಟನೆ ನಡೆದಿದೆ.

ತನ್ನ ಜಮೀನಿನ ಬೆಳೆ ಕಾಯುವ ನಿಟ್ಟಿನಲ್ಲಿ ರಾತ್ರಿ ಮನೆಯಿಂದ ಹೊರಗೆ ಬಂದಾತನನ್ನು ಆನೆಯೊಂದು ತುಳಿದು ಸಾಯಿಸಿರುವ ಘಟನೆ ವರದಿಯಾಗಿದೆ.
 ಹೆಗ್ಗನೂರುದೊಡ್ಡಿ ನಿವಾಸಿ ಹಾಗೂ ರೈತ  ಕರಿಯಪ್ಪನವರನ್ನು ದಿನಾಂಕ 15/12/2024 ರ ಬೆಳ್ಳಂಬೆಳಿಗ್ಗೆ ಭಾನು ವಾರ ಬೆಳಿಗ್ಗೆ  ಎರಡು ಗಂಟೆ ಸಮಯದಲ್ಲಿ ಜಮೀನಿನಲ್ಲಿ ರಾಗಿಯ ಬೆಳೆಯ ಕಾಯುವ ಸಂಧರ್ಭದಲ್ಲಿ ಆನೆ ದಾಳಿ ಮಾಡಿದ ಸಂಬಂಧ ವ್ಯಕ್ತಿ ಮೃತಪಟ್ಟಿರುತ್ತಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ಗ್ರಾಮಸ್ಥರು ಭಯ ಭೀತರಾಗಿರುತ್ತಾರೆ.
 ಸ್ಥಳಕ್ಕೆ ಆರಣ್ಯಾಧಿಕಾರಿಗಳು ಸಾತನೂರು ಪೊಲೀಸ್ ಸಿಬ್ಬಂದಿ ಬೇಟಿಮಾಡಿ ಸ್ಥಳ ಪರಿಸಿಲಿಸಿದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಮೃತರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಆರಣ್ಯಾಧಿಕಾರಿಗಳು ಮೃತರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿ ಸಮಾಧಾನದ ಮಾತುಗಳನ್ನಾಡಿ ಮುಂದಿನ  ಕ್ರಮಕ್ಕೆ ಸೂಕ್ತ ಜಾಗ್ರತೆ ವಹಿಸುವುದಾಗಿ ತಿಳಿಸಿದರು.
ಈಗಾಗಲೇ ಕೆಲವು ದಿನಗಳ ಹಿಂದೆಯಷ್ಟೇ ಸುತ್ತಮುತ್ತಲ ಪ್ರದೇಶದಲ್ಲಿ ಮೂವರು ಸಾ ವನ್ನಪ್ಪಿರುವುದನ್ನು ಇಲ್ಲಿ ಗಮನಿಸಬಹುದು.
ಕಾಡ ಶಿವನಹಳ್ಳಿ ದೊಡ್ಡಿ / ನಾಯಕರ ದೊಡ್ಡಿ ಹೆಗ್ನೂರ್  ಹೆಗ್ನೂರ್ ದೊಡ್ಡಿ ಈ ಮೂರು ಊರುಗಳಲ್ಲಿ ಆನೆ ದಾಳಿಯಿಂದ ಮೂವರು  ಮೃತಪಟ್ಟಿರುವುದು ಖೇದಕರ ಸಂಗತಿ.

 ಮೃತ ಕುಟುಂಬಕ್ಕೆ ಸರ್ಕಾರ ಏನೇ ಪರಿಹಾರ ನೀಡಿದರೂ ಮುನ್ನೆಚ್ಚರಿಕಾ ಕ್ರಮವಾಗಿ ಇಂಥ ಘಟನೆಗಳು  ಮತ್ತೆ ಸಂಭವಿಸದಂತೆ ಯಾವುದೇ ಶಾಶ್ವತ ಪರಿಹಾರಕ್ಕೆ ಕೈಗೊಂಡಿರುವುದಿಲ್ಲ ಎಂಬುದು ಇಲ್ಲಿನ ಸಾರ್ವಜನಿಕರ ಅಳಲು. 
ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮ ಜರುಗಿಸಲಿದೆ ಎಂಬುದು ಕಾದು ನೋಡಬೇಕಿದೆ.
ವರದಿ : ಸತೀಶ್ ಕುಮಾರ್ ಎಸ್.




Post a Comment

0Comments

Post a Comment (0)