ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮಹತ್ವಪೂರ್ಣ ಕಾರ್ಯಕ್ರಮವೆಂದರೆ ಅದುವೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಸ್ತುತ ಮಂಡ್ಯದಲ್ಲಿ ಇದೆ ಡಿಸೆಂಬರ್ ದಿನಾಂಕ 20 ಶುಕ್ರವಾರ 21 ಶನಿವಾರ 22 ಭಾನುವಾರ 2024 ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ವೈಭವದಿಂದ ನಡೆಯುತ್ತಿದೆ ಸಮ್ಮೇಳನದ ಸರ್ವಾಧ್ಯಕ್ಷರಾದ ನಾಡೋಜ ಡಾ ಗೊ ರು ಚನ್ನಬಸಪ್ಪ ಅವರು ಕನ್ನಡಮ್ಮನ ರಥವನ್ನು ಎಳೆಯಲಿದ್ದಾರೆ ಕಸಾಪ ಅಧ್ಯಕ್ಷರಾದ ನಾಡೋಜ ಡಾ ಮಹೇಶ್ ಜೋಶಿ ಅವರ ನಾಯಕತ್ವದಲ್ಲಿ ಮಂಡ್ಯ ಜಿಲ್ಲಾ ಕಸಾಪದ ಉಸ್ತುವಾರಿಯಲ್ಲಿ ಮಂಡ್ಯ ಜಿಲ್ಲಾ ಆಡಳಿತದ ಜೊತೆಗೆ ಕರ್ನಾಟಕ ಸರ್ಕಾರದ ಬೆಂಬಲದೊಂದಿಗೆ ಸಮ್ಮೇಳನವು ಯಶಸ್ವಿಯಾಗಲು ಸಿದ್ಧತೆಯಾಗುತ್ತಿದೆ
ಈ ಒಂದು ಅಕ್ಷರ ಜಾತ್ರೆಯಲ್ಲಿ ಭಾಗವಹಿಸಲು ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಗೌರವ ಕಾರ್ಯದರ್ಶಿಗಳಾದ ನೇ ಭ ರಾಮಲಿಂಗಶೆಟ್ಟಿ ಮತ್ತು ಡಾ ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಬಿ ಎಂ ಪಟೇಲ್ ಪಾಂಡು ನಾವುಗಳು ಸೇರಿದಂತೆ ಎಲ್ಲಾ ಕನ್ನಡದ ಮನಸುಗಳು ಮಂಡ್ಯದ ಕಡೆ ಸಾಗಲಿ ಎಂಬ ಅಭಿಲಾಷೆ ನಮ್ಮದು...