ಅಂಬಿನ ಕಂದಲು

VK NEWS
By -
0

ಅಂಬಿನ ಕಂದಲು ಎಂದರೆ ಹಿತ್ತಾಲೆಯಲ್ಲಿ ತಯಾರಿಸಿದ ಒಂದು ದೇವರ ಡಬ್ಬಿ.ಇದು ಲಕ್ಷ್ಮಿ ಕಂದಲು ಎಂದು ಕೂಡಾ ಕರೆಯಲ್ಪಡುತ್ತದೆ.ಇದರ ಒಳಗೆ ಅಕ್ಕಿ, ನಾಣ್ಯ, ಅಡಿಕೆ ಇಟ್ಟು ಮೇಲೆ ತಾಳಿ ಅಥವಾ ಅರಿಶಿಣದ ಕೊಂಬು ಕಂಠಕ್ಕೆ ಸುತ್ತಿರುತ್ತಾರೆ.ಇದು ಲಕ್ಷ್ಮಿ, ಪಾರ್ವತಿ ಪ್ರತೀಕ.ಅನ್ನಪೂರ್ಣೇಶ್ವರಿ ಕೂಡಾ 

 ಸಾಮಾನ್ಯವಾಗಿ ಶ್ರಾವಣ ಹಾಗು ಇತರೆ ದಿನಗಳಲ್ಲಿ ಹೆಣ್ಣು ದೇವರ ಪೂಜೆ ಎಂದರೆ ಅಂಬಿನಾ ಕಂದಲು ಇರಲೇಬೇಕು.






ಪ್ರತಿ ಶುಕ್ರವಾರ ಇದಕ್ಕೆ ಮುತ್ತೈದೆಯರು ಪೂಜೆ ಮಾಡುತ್ತಾರೆ.ಗೌರಿ ಹಬ್ಬದಲ್ಲಿ ಹಾಗು ವರಮಹಾಲಕ್ಷ್ಮಿ ಹಬ್ಬದಲ್ಲಿ ಕಳಸವನ್ನು ಇದಕ್ಕೆ ಇಡುವುದು ಪದ್ಧತಿ.ಅಂಥವರ ಮನೆಗಳಲ್ಲಿ ಒಂದು ಚೊಮ್ ಬಿನ ಗಾತ್ರದ ಆಂಬಿನ ಕಂದಲು ಇರುವುದು.

.ಇದು ಹೇಗೆ ಆಚರಣೆಗೆ ಬಂತು ಎಂಬುದು ಇನ್ನೂ ನಿಖರವಾಗಿ ತಿಳಿದಿಲ್ಲ.ಇದನ್ನು ಪೂಜಿಸುವ ಪದ್ಧತಿ ಎಲ್ಲರ ಮನೆಗಳಲ್ಲೂ ಸಾಮಾನ್ಯವಾಗಿ ಇರುವುದಿಲ್ಲ.ಮದುವೆ ಆದಾಗ ವಧುವಿನ ಮನೆಯಲ್ಲಿ ದೇವರುಗಳ ಜೊತೆಯಲ್ಲಿ ಇದನ್ನು ಕೊಡುವ ಪದ್ಧತಿ ಇದೆ.ಇನ್ನು ಕೆಲವರು ವರನ ಮನೆಯವರು ತಮ್ಮ ಸೊಸೆಗೆ ಅವರ ತವರು ಮನೆಯವರು ಇದನ್ನು ಕೊಡಬೇಕು ಎಂದು ಕೇಳಿ ಪಡೆದುಕೊಳ್ಳುತ್ತಾರೆ.

 ಒಟ್ಟಿನಲ್ಲಿ ಈ ಪದ್ಧತಿ ಇರುವವರು ಇದನ್ನು ಬಿಡದೆ ದೇವರ ಗೂಡಿನಲ್ಲಿ ಇಟ್ಟು ಪೂಜೆ ಮುಂದುವರೆಸಿದರೆ ಸರಿ.

ಆಗಾಗ್ಗೆ ಇದರ ಅಕ್ಕಿ ತೆಗೆದು ಅನ್ನಕ್ಕೆ ಬಳಸಿ, ಹೊಸ ಅಕ್ಕಿ ಇದರಲ್ಲಿ ತಂಬುವರು.ಸೂತಕ, ಮೈಲಿಗೆ, ಪುರುಡು ಇತ್ಯಾದಿ ಇದ್ದಾಗ ಇದನ್ನು ತೊಳೆದು ಹೊಸಾ ಅಕ್ಕಿ ತುಂಬಿ ಇಡುವರು.ದೇವರಗೂಡಿನಲ್ಲಿ ಇಟ್ಟು ಅಶೌಚ ಸಮಯದಲ್ಲಿ ಇದನ್ನು ಮುಟ್ಟುವುದಿಲ್ಲ.

ಕಲಸಾಪುರದ ಅಮ್ಬಿನ ಕಂದಲು ವರಮಹಾಲಕ್ಷ್ಮಿ ಇಡಲು ಪ್ರಸಿದ್ಧಿ ಪಡೆದಿದೆ.

 ವೈಚಾರಿಕವಾಗಿ ನೋಡಿದರೆ ಮನೆಯಲ್ಲಿ ಸ್ವಲ್ಪವಾದರೂ ಧಾನ್ಯ, ಅಕ್ಕಿ ಇರಲಿ ಎಂದು ಈ ಆಚರಣೆ ಬಂದಿರಬಹುದು.

ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.ಉಳಿದಂತೆ ಇದು ಪ್ರತಿ ಪಂಗದಕ್ಕೂ ಬೇರೆ ರೀತಿ ಹಿರಿಯರ ಸಂಪ್ರದಾಯ ಇರುವಂತೆ ಆಚರಣೆ ಇರುತ್ತದೆ.

 ರಾಧಿಕಾ ಜಿ ಎನ್ 

ಟೀವೀ ಹೋಸ್ಟ್ 

brahmies@gmail.com

Post a Comment

0Comments

Post a Comment (0)