ಅ.ಭಾ.ಕರಕುಶಲ ಕೌಶಲ್ಯ ಮಂಡಳಿ ಅಧ್ಯಕ್ಷರಾಗಿ ಕೆ.ಎಲ್ ರಮೇಶ್

VK NEWS
By -
0

 ಬೆಂಗಳೂರು, ಡಿ.24 ಪ್ರಖ್ಯಾತ ವಿಜಯಲಕ್ಷ್ಮೀ ಅಗರ್ ಬತ್ತಿ ತಯಾರಕ ಸಂಸ್ಥೆಯ  ಪಾಲುದಾರ ರೊಟೇರಿಯನ್ ಕೆ ಎಲ್ ರಮೇಶ್ ಅವರು ಅಖಿಲ ಭಾರತ ಕರಕುಶಲ ಮತ್ತು ನೆಲ ಹಾಸು (ಕಾರ್ಪೆಟ್)ವಲಯದ ಕೌಶಲ್ಯ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆಅವರು ಈ ಮಂಡಳಿಯ ಸಹ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರಿನವರಾದ ರಮೇಶ್ ಸಾಮಾಜಿಕ ಸೇವಾ ಕ್ಷೇತ್ರದ ಹಲವಾರು ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಈ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಬಹುತೇಕ ಉತ್ತರ ಭಾರತೀಯರೇ ನೇಮಕಗೊಳ್ಳುತ್ತಿದ್ದರು. ಇದೀಗ ಈ ಹುದ್ದೆ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತಕ್ಕೆ ಅದರಲ್ಲಿಯೂ ಕರ್ನಾಟಕಕ್ಕೆ ದೊರೆತಿರುವುದು ಹೆಮ್ಮೆಯ ಸಂಗತಿ. 

ಇನ್ನುಮುಂದೆ ಕೌಶಲ್ಯಾಭಿವೃದ್ಧಿಯ ಸಿಂಹಪಾಲು ದಕ್ಷಿಣಕ್ಕೆ ಹರಿಯಲು ಶ್ರಮಿಸುವುದಾಗಿ ರಮೇಶ್ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ಮಂಡಳಿಯ ಸಹಮತವನ್ನೂ ಗಿಟ್ಟಿಸಿಕೊಂಡಿದ್ದಾರೆ.


Post a Comment

0Comments

Post a Comment (0)