ವಿಜಯವಾಡ, ಡಿಸೆಂಬರ್ 04, 2024:
ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಆಂಧ್ರಪ್ರದೇಶದ ಮಾನ್ಯ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು ಅವರನ್ನು ವಿಜಯವಾಡದ ಅವರ ನಿವಾಸದಲ್ಲಿ ಭೇಟಿಯಾದರು. ಈ ಶುಭ ಸಂದರ್ಭದಲ್ಲಿ, ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯ ಅಭಿವೃದ್ಧಿಗೆ ಎಚ್.ಎಚ್.ಶ್ರೀ ಸ್ವಾಮೀಜಿ ₹ 50 ಲಕ್ಷಗಳ ಚೆಕ್ ಅನ್ನು ದಯಪಾಲಿಸಿದರು.
ಆಂಧ್ರಪ್ರದೇಶದ ಶಿಕ್ಷಣ ಸಚಿವರಾದ ಶ್ರೀ ನಾರಾ ಲೋಕೇಶ್, ಶಾಸಕರಾದ ಡಿ ವೆಂಕಟಕೃಷ್ಣ ರೆಡ್ಡಿ, ಕವಲಿ, ಶ್ರೀ ಪಿ.ನಾಗಭೂಷಣಂ, ಬಿಜೆಪಿ ರಾಜ್ಯ ಮಾಧ್ಯಮ ಉಸ್ತುವಾರಿ ಉಪಸ್ಥಿತರಿದ್ದರು. ಶ್ರೀ ಎನ್.ಚಂದ್ರಬಾಬು ನಾಯ್ಡು ಮತ್ತು ಶ್ರೀ ನಾರಾ ಲೋಕೇಶ್ ಅವರಿಗೆ ಶ್ರೀ ರಾಯರ ಶೇಷವಸ್ತ್ರ, ಫಲಮಂತ್ರಾಕ್ಷತೆ ಮತ್ತು ಸ್ಮರಣಿಕೆಯನ್ನು ನೀಡಿ ಪೂಜ್ಯ ಶ್ರೀ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಶ್ರೀಮಠದ ಪದಾಧಿಕಾರಿಗಳು ಉಪಸ್ಥಿತರಿದ್ದರು.