ಬೆಂಗಳೂರು : ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಸಂಸ್ಥೆಯ ವಜ್ರ ಮಹೋತ್ಸವದ ಅಂಗವಾಗಿ ಮಲ್ಲೇಶ್ವರದ ಸಂಪಿಗೆ ರಸ್ತೆಯ11ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 28, ಶನಿವಾರ ಸಂಜೆ 6-00 ಗಂಟೆಗೆ 'ನಾದಜ್ಯೋತಿ ಪುರಸ್ಕೃತೆ' ವಿದುಷಿ ಎಂ.ಎಸ್. ವಿದ್ಯಾ ಅವರಿಂದ "ಸಂಗೀತ ಕಾರ್ಯಕ್ರಮ".
ವಾದ್ಯ ಸಹಕಾರ : ವಿದುಷಿ ಸಿ.ವಿ. ಶೃತಿ (ಪಿಟೀಲು), ವಿದ್ವಾನ್ ಚೇತನ್ ಮೂರ್ತಿ (ಮೃದಂಗ), ವಿದ್ವಾನ್ ನವೀನ್ ಚಂದ್ರಪ್ರಕಾಶ್ (ಖಂಜರ).
ಡಿಸೆಂಬರ್ 29, ಭಾನುವಾರ ಸಂಜೆ 6-00 ಗಂಟೆಗೆ ಡಾ|| ಗೀತಾ ಆರ್. ಭಟ್ ಇವರಿಂದ "ವೀಣಾ ವಾದನ". ವಾದ್ಯ ಸಹಕಾರ : ವಿದ್ವಾನ್ ಆನೂರು ದತ್ತಾತ್ರೇಯ ಶರ್ಮಾ (ಮೃದಂಗ), ವಿದ್ವಾನ್ ಟಿ.ಎನ್. ರಮೇಶ್ (ಘಟ) ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಪದಾಧಿಕಾರಿ ಶ್ರೀ ಕಟ್ಟೆ ಸತ್ಯನಾರಾಯಣ ತಿಳಿಸಿದ್ದಾರೆ.