ಸುಸ್ಥಿರ ಅಭಿವೃದ್ದಿ ತನ್ನದೇ ರೀತಿಯಲ್ಲಿ ಪರಿಸರವನ್ನು ಇನ್ನಷ್ಟು ಮಲಿನಗೊಳಿಸುತ್ತಿದೆ: ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲ ಗೌಡರು

VK NEWS
By -
0

ಬೆಂಗಳೂರು ನವೆಂಬರ್‌ 30 : ಜಾಗತಿಕವಾಗಿ ಸುಸ್ಥಿರ ಅಭಿವೃದ್ದಿಯ ಹೆಸರಿನಲ್ಲಿ ಪರಿಸರದ ಮೇಲೆ ಇನ್ನಷ್ಟು ಆಘಾತಗಳನ್ನು ನಡೆಸಲಾಗುತ್ತಿದೆ. ಮುಂದವರಿದ ದೇಶಗಳು ತಮ್ಮ ವಿಲಾಸಿ ಜೀವನಕ್ಕೋಸ್ಕರ ಪರಿಸರಕ್ಕೆ ಮಾರಕವಾಗುವ ಚಟುವಟಿಕೆಗಳ ಮೂಲಕ ಜಾಗತಿಕ ತಾಪಮಾನ ಹೆಚ್ಚಲು ಕಾರಣವಾಗಿವೆ ಎಂದು ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲ ಗೌಡರು ಅಭಿಪ್ರಾಯ ಪಟ್ಟರು.

 ನಗರದ ಅರಮನೆ ಮೈದಾನದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಸುಸ್ಥಿರ ಭವಿಷ್ಯಕ್ಕಾಗಿ ಸಿಎಸ್‌ಆರ್‌ ಹಾಗೂ ಅನುಷ್ಠಾನ ಸಂಸ್ಥೆ ಗಳ ಸಹಯೋಗ ಸಮಾವೇಶ ವೇಮಾ ಗೆ ಚಾಲನೆ ನೀಡಿ ಅವರು ಮಾತನಾಡಿದರು.

 ಭಾರತ ದೇಶದಲ್ಲಿ ಸಂವಿಧಾನದ 44  ನೇ ತಿದ್ದುಪಡಿಯ ಮೂಲಕ ಪರಿಸರ ಮತ್ತು ಬಯೋಡೈವರ್ಸಿಟಿಯನ್ನು ಕಾಪಾಡುವ ಅಂಶಗಳನ್ನು ಸೇರಿಸಲಾಗಿದೆ. ಅದರ ನಂತರ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠದ ಮಾಲಿನ್ಯದ ಬಹುತೇಕ ಅಂಶಗಳಲ್ಲಿ ತನ್ನ ತೀರ್ಪು ನೀಡಿದೆ. ಆದರೆಅದನ್ನು ಅನುಸರಿಸುವ ನಿಟ್ಟಿನಲ್ಲಿ ಇನ್ನೂ ಕೂಡಾ ಹೆಚ್ಚಿನ ಪ್ರಯೋಜನ ಆಗದೇ ಇರುವುದು ವಿಷಾದನೀಯ. ಗ್ರಾಮೀಣ ಪ್ರದೇಶವನ್ನೂ ಈ ಮಾಲಿನ್ಯ ಬಿಟ್ಟಿಲ್ಲ ಇಂದು ಕೃಷಿಯಲ್ಲಿ ಬಳಕೆಯಾಗುವ ಕೀಟನಾಶಕಗಳು ಹಾಗೂ ರಾಸಾಯನಿಕ ವಸ್ತುಗಳು ನಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಕೊಳ್ಳುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಒಂದು ಅಕ್ವಿವಿಸಮ್‌ ಪ್ರಾರಂಭವಾಗಬೇಕಾಗಿದೆ. ಕಾರ್ಪೋರೇಟ್‌ ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಅನುಷ್ಠಾನ ಸಂಸ್ಥೆಗಳ ಜೊತೆಗೂಡುವ ಮೂಲಕ ಪರಿಸರವನ್ನು ಇನ್ನಷ್ಟು ಉತ್ತಮ ಮಾಲಿನ್ಯರಹಿತ ಮಾಡುವ ನಿಟ್ಟಿನಲ್ಲಿ ಒಂದಾಗಬೇಕು. "WEMAAA - ವೇಮಾ" ದಂತಹ ಸಂಸ್ಥೆಗಳು ಹಮ್ಮಿಕೊಂಡಿರುವ ಇಂತಹ ಕಾರ್ಯಕ್ರಮಗಳ ಜೊತೆಯಲ್ಲಿ ನಾವೆಲ್ಲರೂ ಇದ್ದೇವೆ ಎಂದು ಹೇಳಿದರು.

 ವೇದ ಹಾಗೂ ಆಗಮಗಳ ವಿಶ್ಲೇಷಕರುಸಂಶೋಧಕರು ಹಾಗೂ ವೇಮಾ ಕಾರ್ಯಕ್ರಮದ ರೂವಾರಿಗಳಾಗಿರುವ ಶ್ರೀ ಶ್ರೀ ಶ್ರೀ ಅಗಸ್ತ್ಯ ಗುರೂಜಿ ಅವರು ಮಾತನಾಡಿಸುಸ್ಥಿರ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಪೋರೇಟ್‌ ಸಂಸ್ಥೆಗಳ ಮುಖ್ಯಸ್ಥರುಗಳು ಹಾಗೂ ಅನುಷ್ಠಾನ ಸಂಸ್ಥೆಗಳ ಪ್ರಮಖ ಪಾಲುದಾರರನ್ನು ಒಂದೇ ವೇದಿಕೆಯ ಅಡಿಯಲ್ಲಿ ಒಗ್ಗೂಡಿಸುವ ಮಹತ್ವದ ಶೃಂಗಸಭೆಯನ್ನು ಆಯೋಜಿಸಿದ್ದೇವೆ. 


ಇಂಟರ್‌ನ್ಯಾಷನಲ್‌ ರಿಸರ್ಚ್‌ ಕೌನ್ಸಿಲ್‌ ಫಾರ್‌ ಎನ್‌ವಿರಾನ್ಮೇಂಟ್‌ ಇನ್ಕ್ಲೂಷನ್‌ ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ, 12 ನಿರ್ಣಾಯಕ ವಲಯಗಳಲ್ಲಿ ಪರಿಣಾಮಕಾರಿ ಯೋಜನೆಗಳನ್ನು ವಿನ್ಯಾಸಗೊಳಿಸಲು ಮತ್ತು ಕಾರ್ಯಗತಗೊಳಿಸಲುಕಾರ್ಪೋರೇಟ್‌ಗಳು ಹಾಗೂ ಅನುಷ್ಠಾನ ಸಂಸ್ಥೆಗಳು ಪರಿಣಾಮಕಾರಿಯಾಗಿ ಸಹಕರಿಸುವ ವೇದಿಕೆಯನ್ನು ರಚಿಸುವ ಮೂಲಕ ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್‌) ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮೂಡಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ."WEMAAA - ವಿಮಾ ಕೇವಲ ಒಂದು ಸಂಸ್ಥೆಯಲ್ಲಇದು ಸಾಂಸ್ಥಿಕ ಆಕಾಂಕ್ಷೆಗಳನ್ನು ತಳಮಟ್ಟದ ವಾಸ್ತವಗಳೊಂದಿಗೆ ಸಂಪರ್ಕಿಸುವ ಚಳುವಳಿಯಾಗಿದೆ. ಇದು ಸಮಾಜ ಮತ್ತು ಪರಿಸರದ ಮೇಲೆ ಶಾಶ್ವತ ಪರಿಣಾಮಗಳನ್ನು ಉಂಟುಮಾಡುವ ಮಹತ್ವದ ಯೋಜನೆಯಾಗಿದೆ ಎಂದರು.

 ಎರಡು ದಿನಗಳ ಕಾಲ ನಡೆಯಲಿರುವ ಈ ಸಮಾವೇಶದಲ್ಲಿ ಹಲವಾರು ಕಾರ್ಪೋರೇಟ್‌ ಸಂಸ್ಥೆಗಳ ಪ್ರಮುಖರು ಹಾಗೂ ಅನುಷ್ಠಾನ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


Post a Comment

0Comments

Post a Comment (0)