ಮೈಸೂರು ನಗರದ ಅಭಿವೃದ್ಧಿಗೆ ವಿಸ್ತøತ ಯೋಜನೆ ರೂಪಿಸಲಾಗುವುದು - ಸಚಿವ ಡಾ. ಹೆಚ್ ಸಿ ಮಹದೇವಪ್ಪ

VK NEWS
By -
0


ಮೈಸೂರು / ಬೆಂಗಳೂರು, (ಕರ್ನಾಟಕ ವಾರ್ತೆ): ಸಾರ್ವಜನಿಕರ ಅಮೂಲ್ಯ ಸಲಹೆಗಳನ್ನು ಪರಿಗಣಿಸಿ ಮೈಸೂರು ನಗರದ ಅಭಿವೃದ್ಧಿಗೆ ವಿಸ್ತøತ ಯೋಜನೆ ರೂಪಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ನಗರದ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ 35 ಕೋಟಿ ಇದ್ದ ಭಾರತದ ಜನಸಂಖ್ಯೆ ಇಂದು 140 ಕೋಟಿ ಮೀರಿದೆ. ಆದರೆ ಭೌಗೋಳಿಕ ಪ್ರದೇಶ ಅμÉ್ಟೀ ಇದೆ. ಅದೇ ರೀತಿ ಮೈಸೂರು ಜನಸಂಖ್ಯೆ 3 ಪಟ್ಟು ಹೆಚ್ಚಳ ಆಗಿದೆ. ಮೈಸೂರು ನಗರ ವೇಗವಾಗಿ ಬೆಳೆಯುತ್ತಿರುವ ನಗರ. ಅದೇ ರೀತಿ ಮೂಲಭೂತ ಸೌಲಭ್ಯಗಳನ್ನು ನೀಡಬೇಕಾಗಿದೆ. ಆದ್ದರಿಂದ ಸಲಹೆ ಸೂಚನೆಗಳನ್ನು ಸ್ವೀಕಾರ ಮಾಡಲು ಈ ಚಿಂತನ ಮಂಥನ ಸಭೆಯನ್ನು ಏರ್ಪಡಿಸಲಾಗಿದೆ.

ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಹಾಗೂ ನಿರ್ದೇಶನದ ಮೇರೆಗೆ ಮೈಸೂರು ಅಭಿವೃದ್ಧಿಯ ಅನುಗುಣವಾಗಿ ಭೌಗೋಳಿಕ ವಿಸ್ತೀರ್ಣ ಅμÉ್ಟೀ ಇದೆ. ಜನ ಸಂಖ್ಯೆ ಹೆಚ್ಚಳ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸವಲತ್ತು ನೀಡಲು ಮೈಸೂರನ್ನು ಯೋಜನಾಬದ್ಧವಾಗಿ ಅಭಿವೃದ್ಧಿ ಪಡೆಸಲು ಸಾರ್ವಜನಿಕರಿಂದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಸಲಹೆಗಳನ್ನು ನೀಡಬೇಕು. ಐತಿಹಾಸಿಕ ಮೈಸೂರು ನಗರದಲ್ಲಿ ಇನ್ನಷ್ಟು ಸುಂದರವಾಗಿ ನಿರ್ಮಾಣ ಮಾಡಲು ದೂರದೃಷ್ಟಿ ಇಟ್ಟುಕೊಂಡು ಯೋಜನೆ ರೂಪಿಸಬೇಕಾಗಿದೆ ಎಂದರು.
 
ಇದುವರೆಗೆ ಸುಮಾರು 28 ಜನ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದೀರಿ. ಉಳಿದವರು ತಮ್ಮ ಸಲಹೆಗಳನ್ನು ಬರವಣಿಗೆಯಲ್ಲಿ ನೀಡಬಹುದಾಗಿದೆ. ತಾವು ನೀಡಿರುವ ಹಾಗೂ ಮುಂದೆ ನೀಡುವ ಸಲಹೆಗಳನ್ನು ಕ್ರೋಢಿಕರಿಸಿ ಮೈಸೂರು ಅಭಿವೃದ್ಧಿಗೆ ಪೂರಕವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಮಾನ್ಯ ಮುಖ್ಯಮಂತ್ರಿಗಳು ಹೆಚ್ಚಿನ ಅನುಧಾನ ನೀಡಿದ್ದಾರೆ. ಜಿಲ್ಲಾ ಆಸ್ಪತ್ರೆ ನಿರ್ಮಾಣ, ಕಾವೇರಿ ಕಬಿನಿ ಕುಡಿಯುವ ನೀರಿನ ಪೂರೈಕೆ, ದೊಡ್ಡಕೆರೆ ರಸ್ತೆ ಅಭಿವೃದ್ದಿ, ಜಂಬೂಸವಾರಿ ಮಾರ್ಗದ ರಸ್ತೆ ಕಾಂಕ್ರಿಟ್ ಮಾಡಿರುವುದು ಹೀಗೆ ಹತ್ತು ಹಲವು ಅಭಿವೃದ್ಧಿ ಗಳನ್ನು ಮಾಡಲಾಗಿದೆ ಎಂದರು.
 
ಪಶು ಸಂಗೋಪನೆ ಹಾಗೂ ರೇμÉ್ಮ ಇಲಾಖೆಯ ಸಚಿವರಾದ ಕೆ.ವೆಂಕಟೇಶ್ ಅವರು ಮಾತನಾಡಿ ಬಹಳ ಜನ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದೀರಿ. ಮೈಸೂರು ಆರ್ಥಿಕವಾಗಿ ಶೈಕ್ಷಣಿಕವಾಗಿ ಸೌಲಭ್ಯಗಳಲ್ಲಿ ಬೆಳವಣಿಗೆ ಆಗಬೇಕು. ತಮ್ಮ ಅಮೂಲ್ಯ ಸಲಹೆಗಳನ್ನು ಪಡೆದು ಕ್ರಮವಹಿಸಲಾಗುವುದು. ಮೈಸೂರು ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ.ಈ ನಿಟ್ಟಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಮೈಸೂರು ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣರಾಜ ದತ್ತ ಒಡೆಯರ್ ಅವರು ಮಾತನಾಡಿ ಬೃಹತ್ ಮೈಸೂರು ಮಹಾನಗರ ಪಾಲಿಕೆ ಮಾಡುವುದು ತುಂಬಾ ಅವಶ್ಯಕ. ಏಕೆಂದರೆ ಇದರಿಂದ ಕೇಂದ್ರ ಸರಕಾರದ ಹಲವು ಯೋಜನೆಗಳು ಹಾಗೂ ಅನುದಾನ ಬರುತ್ತದೆ. ಇದಕ್ಕೂ ಮುಂಚೆ ಮೈಸೂರು ನಗರದಲ್ಲಿ ಇರುವ ಹಲವು ಸಮಸ್ಯೆಗಳಿಗೆ ಮೊದಲು ಪರಿಹಾರ ನೀಡಿ ನಂತರ ಬೃಹತ್ ಮೈಸೂರು ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.

ನರಸಿಂಹ ರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ ಮೈಸೂರು ಐತಿಹಾಸಿಕ ನಗರ. ರಾಜ ಮಹಾರಾಜರ ಆಳ್ವಿಕೆಯಲ್ಲಿ ದೂರದೃಷ್ಟಿಯನ್ನು ಇಟ್ಟುಕೊಂಡು ನಗರವನ್ನು ಮಹಾರಾಜರು ಕಟ್ಟಿದ್ದಾರೆ. ಮೈಸೂರು ನಗರದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ ಎಂದರು.

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ಮಾತನಾಡಿ ರೆವಿನ್ಯೂ ಬಡಾವಣೆಗಳನ್ನು ಅಕ್ರಮ ಇರುವುದನ್ನು ಸಕ್ರಮ ಮಾಡಲು ಸರ್ಕಾರ ಕ್ರಮ ವಹಿಸಬೇಕು. ಮೂಡಾ ವತಿಯಿಂದ ಅಭಿವೃದ್ಧಿ ಪಡಿಸಿರುವ ಬಡಾವಣೆಗಳು ವಿಶಾಲವಾಗಿ ಇವೆ. ಇದೇ ರೀತಿ ವಿಶಾಲ ರಸ್ತೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ ದೇವೇಗೌಡ ಅವರು ಮಾತನಾಡಿ ಮೈಸೂರು ನಗರದಲ್ಲಿ ಸುಮಾರು 150 ಬಡಾವಣೆಗಳು ಆಗಿವೆ. ಆದರೆ ಅವುಗಳ ಅಭಿವೃದ್ಧಿ ಆಗಬೇಕಿದೆ. ಕ್ರಮಬದ್ಧವಾಗಿ ಬಡಾವಣೆಗಳ ನಿರ್ಮಾಣ ಆಗಿಲ್ಲ. ಇವುಗಳನ್ನು ಸರಿಪಡಿಸಬೇಕು ಎಂದರು.

ಮೈಸೂರು ನಗರ ಬೆಳವಣಿಗೆಯ ವಿಸ್ತರಣೆ ಸಾರ್ವಜನಿಕರ ಸಲಹೆಗಳು:

ಮಾರುಕಟ್ಟೆ ಅಭಿವೃದ್ಧಿ, ಪಾರಂಪರಿಕ ಕಟ್ಟಡಗಳ ಅಭಿವೃದ್ಧಿ, ನೀರಿನ ವ್ಯವಸ್ಥೆ, ಯುಜಿಡಿ ಲೈನ್ ಸಮರ್ಪಕವಾಗಿ ಇರಬೇಕು. ಸಿಟಿ ಬಸ್ ಸ್ಟಾಂಡ್ ಹಾಗೂ ಸಬರ್ಬನ್ ಬಸ್ ಸ್ಟಾಂಡ್ ಜನರಿಗೆ ದೂರ ಇದೆ. ವಯಸ್ಸಾದವರು ಅಲ್ಲಿಗೆ ನಡೆದು ಹೋಗಲು ಸಾಧ್ಯವಿಲ್ಲ.
 
ಮೈಸೂರು ನಗರದ ರಿಂಗ್ ರೋಡ್ ಆಚೆ ಹೆಚ್ಚು ಕಾಳಜಿ ಇಲ್ಲ. ಖಾಸಗಿ ನಿವೇಶನಗಳ ಲೇಹೌಟ್, ಮೈಸೂರು ನಗರದ ನಾಲ್ಕು ದಿಕ್ಕುಗಳಲ್ಲಿ ಬಸ್ ಸ್ಟಾಂಡ್ ಮಾಡಿ, ಇದರಿಂದ ಜನರು ಮೈಸೂರು ಮಧ್ಯೆ ಬರುವ ಒತ್ತಡ ಕಡಿಮೆ ಆಗುತ್ತದೆ. ವಾರ್ಡ್‍ಗಳಲ್ಲಿ ಕ್ಲಿನಿಕ್ ಮಾಡಬೇಕು. ಶೈಕ್ಷಣಿಕವಾಗಿ ಪ್ರತಿ ವಾರ್ಡ್ ನಲ್ಲಿ ಶಾಲೆಗಳಲ್ಲಿ ಆಂಗ್ಲ ಭಾμÉಯ ಬೋಧನೆ ಮೂಲಕ ಮಾಡಬೇಕು. ಪಾದ ಚಾರಿ ಮಾರ್ಗ ಒತ್ತುವರಿ ಆಗಿದೆ. ಅದನ್ನು ತೆರವುಗೊಳಿಸಿ ಎಂದರು.

ವಾರ್ಡ್ ಸಮಿತಿಗಳನ್ನು ರಚನೆ ಮಾಡಬೇಕು. ಮೈಸೂರು ನಗರ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣ ಬೇರೆ ಬೇರೆ ಕಡೆ ಇದ್ದು ಎರಡು ನಿಲ್ದಾಣಗಳನ್ನು ತಲುಪಲು ಹಿರಿಯ ನಾಗರಿಕರಿಗೆ ಸಮಸ್ಯೆ ಆಗುತ್ತಿದೆ. ಇದನ್ನು ಸರಿಪಡಿಸಿ ಎಂದು ಮನವಿ ಮಾಡಿದರು.

ಮೈಸೂರಿನಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು. ಅರಮನೆಯನ್ನು ಕೇಂದ್ರ ಬಿಂದುವಾಗಿ ಸುತ್ತಮುತ್ತಲಿನ 5 ಕಿಮೀ ವ್ಯಾಪ್ತಿಯನ್ನು ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಬೇಕು. ಹಸಿ ಕಸವನ್ನು ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ಗ್ಯಾಸ್ ಉತ್ಪಾದನೆ ಮಾಡಬಹುದಾಗಿದೆ. ವರುಣಾ ಚಾನಲ್ ಸುತ್ತ ಮುತ್ತ ಗ್ರೀನ್ ಬೆಲ್ಟ್ ಅಂತ ಮಾಡಿದ್ದು ಇದನ್ನು ಹಾಗೆ ಉಳಿಸಿಕೊಳ್ಳಬೇಕು. ಬಡ ಜನರ ಮಕ್ಕಳು ಕಂಪ್ಯೂಟರ್ ಶಿಕ್ಷಣ ಪಡೆಯಲು ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ತೆರೆಯಬೇಕು. ಮೈಸೂರು ನಗರದ ಹೊರವಲಯದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಬೇಕು. ಗ್ರಂಥಾಲಯಗಳನ್ನು ಹಾಗೂ ವಾಚನಾಲಯಗಳನ್ನು ತೆರೆಯಬೇಕು. ಮೈಸೂರು ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯನ್ನು ಡಿಜಿಟಲ್ ವಸ್ತು ಸಂಗ್ರಹಾಲಯವಾಗಿ ಮಾಡಬೇಕು ಎಂದು ಮನವಿ ಮಾಡಿದರು.

ನಗರದಲ್ಲಿ 18 ಪಾರಂಪರಿಕ ರಸ್ತೆಗಳು ಇವೆ. ಈ ರಸ್ತೆಗಳಲ್ಲಿ ಕಮರ್ಶಿಯಲ್ ಕಟ್ಟಡಗಳು ಬರುತ್ತಿವೆ. ಆದರೆ ಇಲ್ಲಿ ಕಮರ್ಶಿಯಲ್ ಕಟ್ಟಡಗಳು ಕಟ್ಟಲು ಅವಕಾಶ ಇಲ್ಲ ಆದ್ದರಿಂದ ಅವಕಾಶ ನೀಡಬಾರದು. 16 ಕಿಮೀ ರಾಜಕಾಲುವೆಗಳು ಇದ್ದು ಇವುಗಳ ಒತ್ತುವರಿ ಆಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು. ಮೈಸೂರು ನಗರ ಈಗಾಗಲೇ ಹೆಚ್ಚು ಬೆಳವಣಿಗೆ ಆಗಿದೆ. ಎಲ್ಲಾ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಆದ್ದರಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.
 
ಪೌರ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಹೆಚ್ಚು ಆದ್ಯತೆ ಇರಬೇಕು. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕಸ ವಿಲೇವಾರಿ ವ್ಯವಸ್ಥೆ ಮಾಡಬೇಕು. ಖಾಸಗಿ ಬಡ ಬಡಾವಣೆಗಳಿಗೆ ರಾಜ ಮಹಾರಾಜರ ಹೆಸರು ಇಡಬೇಕು.ಆಟದ ಮೈದಾನಗಳು ಜಾಸ್ತಿ ಆಗಬೇಕು.. ಪ್ರಾಧಮಿಕ ಆರೋಗ್ಯ ಸೆಂಟರ್ ಗಳು ಜಾಸ್ತಿ ಆಗಬೇಕು. ವಿದ್ಯಾರ್ಧಿಗಳಿಗೆ ಹಾಸ್ಟೇಲ್ ಗಳು ದೊರೆಯುವಂತೆ ಆಗಬೇಕು. ರಾಜ ಕಾಲುವೆಗಳ ಒತ್ತುವಾರಿ ಆಗಿದೆ. ಅದರ ಬಗ್ಗೆ ಹೆಚ್ಚು ಗಮನ ಹರಿಸಿ. ಪಾರಂಪರಿಕ ನಗರಿ ಮೈಸೂರು ತನ್ನದೇ ಆದ ವೈಶಿಷ್ಟ್ಯತೆ ಇದೆ. ಮೈಸೂರು ನಗರವನ್ನು ಸ್ವಚ್ಛ ಆಗಿ ಇಡಿ... ಹೆಚ್ಚು ಸಾಂಸ್ಕøತಿಕ ಅಭಿವೃದ್ಧಿ ಆಗಬೇಕು.

ಮೈಸೂರು ಸ್ವಚ್ಚ ನಗರಿ ಎಂದು 7 ಬಾರಿ ಪ್ರಶಸ್ತಿ ಪಡೆದು ಈಗ 27 ಸ್ಧಾನ ಬಂದಿದೆ. ಇದರಿಂದ ಹೆಚ್ಚು ಪೌರ ಕಾರ್ಮಿಕರ ನೇಮಕ ಮಾಡಬೇಕು. ಪೌರ ಕಾರ್ಮಿಕರ ಕೆಲಸ ಖಾಯಂ ಮಾಡಲು ಅಗತ್ಯ ಕ್ರಮ ಆಗಬೇಕು. ಪಾರಂಪರಿಕ ಕಟ್ಟಡವಾದ ಮಾರುಕಟ್ಟೆ ಶಿಥಿಲ ಆಗುತ್ತಿದೆ. ಅದನ್ನು ಹೊಸದಾಗಿ ಕಟ್ಟಡ ಆಗಿ ಅದು ಸಂರಕ್ಷಣೆ ಆಗಬೇಕು.

ಚಾಮುಂಡಿ ಬೆಟ್ಟವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು. ಮೈಸೂರಿನ ನಾಲ್ಕು ದಿಕ್ಕುಗಳಲ್ಲಿ ಸಂಪರ್ಕ ಬಸ್ ನಿಲ್ದಾಣಗಳನ್ನು ಸ್ಥಾಪನೆ ಮಾಡಬೇಕು. ಮೈಸೂರು ನಗರಕ್ಕೆ ಮೆಟ್ರೋ ರೈಲು ತರಬೇಕು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ ತಿಮ್ಮಯ್ಯ, ವಿಶ್ವನಾಥ್, ಡಾ. ಯತಿಂದ್ರ ಸಿದ್ದರಾಮಯ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಪ್ರಾದೇಶಿಕ ಆಯುಕ್ತರಾದ ರಮೇಶ್, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳಾದ ವಿಷ್ಣುವರ್ಧನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 

Post a Comment

0Comments

Post a Comment (0)