ತರೀಕೆರೆ ಇಂದ ಶಿವಮೊಗ್ಗ ದಾರಿಯಲ್ಲಿ ಎಡಕ್ಕೆ ತಿರುಗಿದರೆ ಕುವೆಂಪು ಯೂನಿವರ್ಸಿಟಿಗೆ ದಾರಿ ಇದೆ.ಅದೇ ದಾರಿಯಲ್ಲಿ ಮುಂದೆ ಹೋದರೆ ,ಲಕ್ಕವಳ್ಳಿ ಗಿಂತ ಹಿಂದೆ ಹಲಸೂರು ಸಿಗುತ್ತದೆ.ಅಲ್ಲಿಂದ ಒಳಕ್ಕೆ ಸೋಮಪುರ ಸಿಗುವುದು.ಅಲ್ಲಿನ ದೇವರೇ ಪ್ರಸನ್ನ ಸೋಮೇಶ್ವರ.ಅಲ್ಲಿ ದೇವಾಲಯದ ಹಿಂಭಾಗದಲ್ಲಿ ಭದ್ರ ನದಿ ಹರಿಯುತ್ತದೆ.ದೇವಾಲಯದ ದೇವರು ಲಿಂಗದಲ್ಲಿ ಉದ್ಭವಿಸಿದ ತ್ರಿಮೂರ್ತಿ.ಮೂಲ ಲಿಂಗವನ್ನು ಕಳ್ಳತನ ಮಾಡಿದ್ದರಿಂದ, ನಂಥರ ಶೃಂನ್ಗೇರಿ ಸ್ವಾಮಿಗಳು ಬೇರೆ ಲಿಂಗ ವನ್ನು ಪ್ರತಿಷ್ಠಾಪಿಸಿದರು.
ಈ ದೇವರ ಉತ್ಸವ ಅಥವಾ ಜಾತ್ರೆ ಡಿಸೆಂಬರ್ನಲ್ಲಿ ನಡೆಯುತ್ತದೆ.ಆದರೆ ಹತ್ತಿರದ ಊರಿನ ಕೆಲ ಕುಟುಂಬಗಳು ಸೋಮ್ಪುರ ಸಂತರ್ಪಣೆ ಎಂಬ ಪೂಜೆಯನ್ನು ಮಾಡುತ್ತಾರೆ.ಇದನ್ನು ಪ್ರತಿ ವರ್ಷ ಅವರ ಅನುಕೂಲದ ಸೋಮವಾರ, ಭಾನುವಾರ,ಇಲ್ಲವೇ ಕಾರ್ತೀಕ ದಲ್ಲಿ ಒಂದು ದಿನ ನಡೆಸುವರು.
: ನಮ್ಮ ತಾಯಿಯ ಅಜ್ಜನ ಮನೆಯವರಾದ ತರೀಕೆರೆಯ ಹಿರೇಕಾತುರ್ ಕುಟುಂಬದವರು ಈ ಪೂಜೆ ಪ್ರತಿ ವರುಷ ನೆರವೇರಿಸುತ್ತಾರೆ.ಅವರ ಹೇಳಿಕೆಯಂತೆ ಆಗಿನ ಕಾಲದಲ್ಲಿ ಒಂದು ಪ್ರಶಸ್ತ ದಿವಸ ಮನೆ ಮಂದಿಯೆಲ್ಲ ಎತ್ತಿನ ಗಾಡಿ ಕಟ್ಟಿಕೊಂಡು ಆಹಾರ ಪದಾರ್ಥ,ತರಕಾರಿ,ಹಣ್ಣು,ಹೂವು, ಇತ್ಯಾದಿ ಹೋ ರಿಸಿಕೊಂಡು ಸೋಂಪುರಕ್ಕೆ ಹೋಗುತ್ತಿದ್ದರಂತೆ.ಅಲ್ಲಿನ ದೇವಾಲಯದಲ್ಲಿ ಅಡಿಗೆ ಶಾಲೆ ,ಪಾತ್ರೆಗಳು ಇದ್ದವು.ಆಗ ಅಲ್ಲಿಗೆ ಹೋದ ನಂತರ ಹಿಂದಿನ ಭದ್ರ ನದಿಯಲ್ಲಿ ಸ್ನಾನ ಮಾಡಿ ಒದ್ದೆ ಮಡಿಯಲ್ಲಿ ಒಂದು ತಂಬಿಗೆ ನೀರನ್ನು ತೆಗೆದುಕೊಂಡು ಹೋಗಿ ದೇವರ ಗರ್ಭ ಗುಡಿಯಲ್ಲಿ ದೇವರಿಗೆ ಅಭಿಷೇಕ ಮಾಡ್ತ್ತಿದ್ದರಂತೆ.ಅಲ್ಲಿ ಒದ್ದೆ ಮಡಿಯಲ್ಲಿ ಪ್ರವೇಶ.ರೇಷ್ಮೆ ವಸ್ತ್ರದಲ್ಲಿ ಸಹ ದೇವರ ಬಳಿ ಹೋಗುವಂತಿಲ್ಲ.ಗಾಡಿಯಲ್ಲಿ ಕುಂಬಳಕಾಯಿ, ಹಾಗು ಹಳ್ಳಿ ಜನ ಬಂದಿರುತ್ತಿದ್ದರಂತೆ.
ಪುರೋಹಿತರು ಗುಡಿಗೆ ಬಂದು ನಿತ್ಯಾರ್ಚನೆ ,ರುದ್ರಾಭಿಷೇಕ ನಡೆಸುತ್ತಿದ್ದರೆ ಇಟ್ಟ ಹೆಂಗಸರು ಹಬ್ಬದಡುಗೆ ತಯಾರಿ ನಡೆಸುತ್ತಿದ್ದರು.ಹಯಗ್ರೀವ,ಪಾಯಸ, ಹುಳಿಯನ್ನ,ಕುಂಬಲಕಾಯಿ ಪಲ್ಯ, ಹುಳಿ ,ಸಾರು, ಎರಡು ಬಗೆ ಪಲ್ಯ ,ಕೋಸಂಬರಿ ಮಜ್ಜಿಗೆ ತಯಾರು ಮಾಡುತ್ತಿದ್ದರು.
ಗಂಡಸರು ಸರದಿಯ ಮೇಲೆ ಅಭಿಷೇಕ ಮಾಡುತ್ತಿದ್ದರು.
ಕಡೆಯಲ್ಲಿ ಪುರೋಹಿತರಿಗೆ ಸಂಭಾವನೆ ನೀಡಿ ಬ್ರಾಹ್ಮಣ ಮುತ್ತೈದೆಯರಿಗೆ ಹಸ್ಥೋದಕ ಹಾಕಿ ಭೋಜನಕ್ಕೆ ಆಹ್ವಾನ ನೀಡುವರು.ಊಟವಾದ ಮೇಲೆ ದಕ್ಷಿಣೆ ಯಥಾಶಕ್ತಿ ನೀಡುತ್ತಿದ್ದರು.ಕಡೆಗೆ ಮುತ್ತೈದೆಯರಿಗೆ ಅರಸಿನ, ಕುಂಕುಮ, ತಾಂಬೂಲ ನೀಡಿ ಎಲ್ಲರೂ ತರೀಕೆರೆಯ ವಾಪಸಾಗುತ್ತಿದ್ದರು.
ಹಳೆ ದೇವರ ಅಂದರೆ ಮೂಲ ವಿಗ್ರಹದ ಫೋಟೋ ಈಗಲು ತರೀಕೆರೆಯ ಕೆಲವರ ಮನೆಯಲ್ಲಿ ಇದೆ.
ಹೆಣ್ಣು ದೇವರ ಗುಡಿಯು ಇದೆ.ಜೊತೆಗೆ ಕೆಲವು ಕಲ್ಲಿನ ಕೆತ್ತನೆ ಹಾಗು ಶಿಲ್ಪಗಳನ್ನು ನೋಡಬಹುದು.
ಈಗ ಅಲ್ಲಿ ದತ್ತ ಆಶ್ರಮ ಒಂದು ಇರಬಹುದೇನೋ.
ಕೃಷಿ ಪ್ರಧಾನವಾದ ಜನ ಆಗ ತಮ್ಮ ಬೆಳೆಗಳನ್ನು ದೇವರಿಗೆ ಅರ್ಪಿಸಿ ನಂಥರ ಬಳಸುತ್ತಿದ್ದ ಆಚರಣೆ ಇದು.
ಒಟ್ಟಿನಲ್ಲಿ ಈ ಸಂತರ್ಪಣೆಯಲ್ಲಿ ನಾನು ಭಾಗವಹಿಸಿದ್ದೆ.ಹಾಗು ಇದು ಮುಂದೆ ಕೂಡಾ ಭಾಗವಹಿಸಲು ಇಚ್ಚ ಪಡುವಂಥ ಒಂದು ಆಚರಣೆ.
ರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com