ಕನ್ನಡ ಸಾಹಿತ್ಯ ಪರಿಷತ್ತು, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ, ಣಮೋಕಾರ ಜೈನ ಅಕಾಡೆಮಿ-ನಾಟ್ಯ ಕುಸುಮಾಂಜಲಿ ವೇದಿಕೆ ಆಶ್ರಯದಲ್ಲಿ ಕನಕ ಜಯಂತ್ಯೋತ್ಸವ

VK NEWS
By -
0

 ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ,

ಕನ್ನಡ ಸಾಹಿತ್ಯ ಪರಿಷತ್ತು, 

ಬೆಂಗಳೂರು ನಗರ ಜಿಲ್ಲೆ.

ಣಮೋಕಾರ ಜೈನ ಅಕಾಡೆಮಿ-ನಾಟ್ಯ ಕುಸುಮಾಂಜಲಿ ಸಾಂಸ್ಕೃತಿಕ ವೇದಿಕೆ ಮತ್ತು ಸಾಂಸ್ಕೃತಿಕ ಪರಿಷತ್ ಕಾಚರಕನಹಳ್ಳಿ, ಸರ್ವಜ್ಞನಗರ ಇವರ ಸಂಯುಕ್ತ ಆಶ್ರಯದಲ್ಲಿ ಕನಕ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿತು. 

ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಖ್ಯ ಅತಿಥಿಗಳು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಸಂತ ಕನಕದಾಸರನ್ನು ಕುರಿತು ಉಪನ್ಯಾಸ ನೀಡಿದ ಅಧ್ಯಾಪಕಿ ಶ್ರೀಮತಿ ಲತಾ ಎನ್.ಎಂ ಸಂತ ಕನಕದಾಸರ ಜೀವನ ಸಂತನಾದ ಜೀವನ ಕುರಿತು ಮತ್ತು ಅವರು ಕನ್ನಡ ಸಾಹಿತ್ಯನೇ ಲೋಕಕ್ಕೆ ನೀಡಿದ ಅಪೂರ್ವ ಕೊಡುಗೆಗಳ ಬಗ್ಗೆ  ಅರ್ಥಗರ್ಭಿತವಾಗಿಸಭೆಗೆ ತಿಳಿಸಿದರು. 


ಅಧ್ಯಕ್ಷತೆ ವಹಿಸಿದ್ದ ಎಂ.ಪ್ರಕಾಶಮೂರ್ತಿ ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷರು, ಕುಲಕುಲ ಕುಲವೆಂದು ಹೊಡೆದಾಡದರಿ ನೀವು ಕುಲದ ನೆಲೆ ಏನಾದರೂ ಬಲ್ಲಿರಾ ಕನಕದಾಸರ ಕೃತಿಯನ್ನು ಸ್ಮರಿಸಿ ಕೊಂಡು ಇಂದಿನ ಪ್ರಸ್ತುತ ಸಮಾಜದಲ್ಲಿ ಅವರ ತತ್ವಗಳು ತೀರಾ ಅವಶ್ಯಕತೆವಾಗಿವೆ ಅವುಗಳನ್ನು ಅಳವಡಿಸಿಕೊಂಡು ನಾವೆಲ್ಲರೂ ಒಗ್ಗಟ್ಟಾಗಿ ಬದುಕಿ ಬಾಳಬೇಕೆಂದು ತಿಳಿಸಿದರು. ಸಂತ ಕನಕದಾಸರ ಆಚರಣೆಯನ್ನು ಅರ್ಥಗರ್ಭಿತವಾಗಿ ಆಚರಿಸಿದ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಘಟಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಘಟಕದ ಅಧ್ಯಕ್ಷರಾದ ಯೋಗಶ್ರೀ ವರ್ಧಮಾನ್ ಕಳಸೂರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಸಭೆಗೆ ಪರಿಚಯಿಸಿದರು. ಜಯಂತಿಯ ಆಚರಣೆಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆಕನಕದಾಸರ ಕೊಡುಗೆಯನ್ನು ಸಮಾಜಕ್ಕೆ ಪರಿಚಯಿಸುವುದು ಆಚರಣೆಯ ಮೂಲ ಉದ್ದೇಶ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಸರ್ವಜ್ಞ ನಗರ ಕ್ಷೇತ್ರದ ವಿವಿಧ ಕ್ಷೇತ್ರಗಳಲ್ಲಿ ಸಾಧಕ ಗಣ್ಯರಾದ ರಂಗ ಕಲಾವಿದ ಮುನಿಸ್ವಾಮ, ಮುನಿರಾಜು ಕಾರ್ಣಿಕ, ಬಿಎಸ್ಎನ್ಎಲ್ ಮುನಿರಾಜ್ ಮತ್ತು ಪ್ರಭಾಕರ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. 

ಸಭೆಯಲ್ಲಿ ಜಿಲ್ಲಾ ಮಹಿಳಾ ಪ್ರತಿನಿಧಿಗಳಾದ ಶ್ರೀಮತಿ ಇಂದಿರಾ ಜಮ್ಮಲದಿನ್ನಿ, ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾದ ಜಯಶ್ರೀ ಸೇತುರಾಮ್ ಣಮೋಕಾರ ಜೈನ ಅಕಾಡೆಮಿಯ ಶ್ರೀಮತಿ ವರ್ಧಮಾನ್ ನಾಟ್ಯಕುಸುಮಾಂಜಲಿ ಸಾಂಸ್ಕೃತಿಯ ವೇದಿಕೆಯ ಗೀತಾ ಮತ್ತು ಶ್ರೀನಾಥ್ ದಂಪತಿಗಳು, ಘಟಕದ ಪ್ರತಿನಿಧಿಗಳಾದ ಕವಿತಾ ರವೀಂದ್ರ, ಜಗದೀಶ್ ಕೃಷ್ಣಮೂರ್ತಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. 

ನವ್ಯ ನಾಟ್ಯಶಾಲಾಮಕ್ಕಳಿಂದ ಕನಕದಾಸರ ಕೃತಿಗಳಿಗೆ ಸಾಮೂಹಿಕ ನೃತ್ಯಗಳು ಜರುಗಿದವು. ಸಭೆಯಲ್ಲಿ ಕನಕದಾಸರ ಪದಗಳ ಗೀತಗಾಯಿನ ನಡೆಯಿತು.

ಕೊನೆಯಲ್ಲಿ ಕಾರ್ಯದರ್ಶಿಗಳಾದ ಡಿ. ಶ್ರೀನಾಥ್ ಸರ್ವರಿಗೂ ವಂದನೆಗಳನ್ನು ಸಮರ್ಪಿಸಿದರು.

Post a Comment

0Comments

Post a Comment (0)