ಬೆಂಗಳೂರು: ಕೂಡ್ಲುವಿನಲ್ಲಿ ನೂತನ ಅಂಚೆ ಕಚೇರಿಯನ್ನು ಆರಂಭಿಸುವ ಮೂಲಕ ಕೂಡ್ಲು ಭಾಗದ ಜನರ ಬಹು ದಿನಗಳ ಆಶಯ ವನ್ನು ಈಡೇರಿಸಲಾಗಿದೆ ಎಂದು ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಅವರು ತಿಳಿಸಿದ್ದಾರೆ.
ಕೂಡ್ಲು ಅಂಚೆ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಈ ಅಂಚೆ ಕಚೇರಿಯಲ್ಲಿ ಎಲ್ಲಾ ಅಂಚೆ ಸೇವೆಗಳು ಲಭ್ಯವಿದ್ದು ಈ ಭಾಗದ ಜನರು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರು ಎಚ್ ಕ್ಯೂ ರೀಜನ್ ನ ಪೋಸ್ಟ್ ಮಾಸ್ಟರ್ ಜನರಲ್ ಎಲ್ ಕೆ ಡಾಶ್ ರವರು ಈ ಅಂಚೆ ಕಚೇರಿಯ ಸಂಪೂರ್ಣ ಸೌಲಭ್ಯವನ್ನು ಕೂಡ್ಲು ಸುತ್ತಮುತ್ತಲಿನ ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಪರ್ವೀನ್ ರಘ್ ಬೀರ್ ಸಿಂಗ್, ಸಹಾಯಕ ಅಂಚೆ ಅಧೀಕ್ಷಕ ಹರ್ಷ ಮತ್ತು ಶ್ರೀಮತಿ ನಳಿನಿ, ಸಾರ್ವಜನಿಕ ಸಂಪರ್ಕ ನಿರೀಕ್ಷಕರಾದ ಬಿ. ಆನಂದ್ ಸ್ಥಳೀಯ ಮುಖಂಡರುಗಳಾದ ಮಂಜಣ್ಣ ಮತ್ತು ವರದರಾಜ್ ಮೊದಲಾದವರು ಹಾಜರಿದ್ದರು.