*ಒತ್ತಡದ ಜೀವನ, ಆಹಾರ ಪದ್ದತಿ ಕ್ರಮ ಸರಿಪಡಿಸಿಕೊಳ್ಳಿ, ಪೈಲ್ಸ್ ನಿಂದ ಮುಕ್ತರಾಗಿ- ಡಾ||ನಾಗರಾಜ್*
ರಾಜಾಜಿನಗರ: ಬಸವೇಶ್ವರನಗರದಲ್ಲಿರುವ ಪುಣ್ಯ ಆಸ್ಪತ್ರೆ ವತಿಯಿಂದ ಸಾರ್ವಜನಿಕರಿಗೆ ಪೈಲ್ಸ್ ನಿಂದ ಮುಕ್ತರಾಗಲು ಉಚಿತ ಶಿಬಿರ ಆಯೋಜಿಸಲಾಗಿತ್ತು.
ಉಚಿತ ಪೈಲ್ಸ್, ಫಿಶರ್, ಫಿಸ್ಟಲಾ ಚಿಕಿತ್ಸೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಪುಣ್ಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕರಾದ ಡಾ||ನಾಗರಾಜ್ ಬಿ.ಪುಟ್ಟಸ್ವಾಮಿರವರು, ಡಾ||ಪುಣ್ಯವತಿ ಸಿ.ನಾಗರಾಜ್ ರವರು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಚಿತ ಶಿಬಿರಕ್ಕೆ ಚಾಲನೆ ನೀಡಿದರು.ಪೈಲ್ಸ್ ರೋಗದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು ನಂತರ ಪೈಲ್ಸ್, ಫಿಶರ್, ಫಿಸ್ಟುಲಾ ದಿಂದ ನರಳುತ್ತಿರುವ ನೂರಾರು ಜನರಿಗೆ ತಪಾಸಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ *ಡಾ|| ನಾಗರಾಜ್ ಪುಟ್ಟಸ್ವಾಮಿ* ರವರು ಮಾತನಾಡಿ ಮನುಷ್ಯ ಒತ್ತಡ ಜೀವನ, ಆಹಾರ ಪದ್ದತಿ, ಸೋಮಾರಿತನದಿಂದ ಪೈಲ್ಸ್ ರೋಗ ಬರುತ್ತದೆ. ಕಾಲಕಾಲಕ್ಕೆ ರೋಗಿಗಳು ಸಂಕೋಚವಿಲ್ಲದ ವೈದ್ಯರನ್ನು ಭೇಟಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.
ಈ ರೋಗವನ್ನು ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಬೇಕು ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ, ಇಲ್ಲದೇ ಹೋದರೆ ರೋಗ ಉಲ್ವಣವಾದರೆ ಪ್ರಾಣಪಾಯ ಸಂಭವಿಸುವ ಸಾಧ್ಯತೆ.
ಸಾರ್ವಜನಿಕರ ಆರೋಗ್ಯವಂತರಾಗಿ ಬಾಳಲು ಪ್ರತಿದಿನ ವ್ಯಾಯಾಮ ಮತ್ತು ಉತ್ತಮ ಆಹಾರ ಪದ್ದತಿ ಅನುಕರಿಸಬೇಕು.
ಪೈಲ್ಸ್ ಆಪರೇಶನ್ ಸಂಪೂರ್ಣ ಉಚಿತವಾಗಿ ಮಾಡಲಾಗುವುದು.
ನಮ್ಮ ಪುಣ್ಯ ಆಸ್ಪತ್ರೆ ವತಿಯಿಂದ ಸತತವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದೆ.
ಪೈಲ್ಸ್ ಎಂದು ಭಯ, ಸಂಕೋಚ ಬಿಡಿ, ವೈದ್ಯರಿಂದ ಸಲಹೆ, ತಪಾಸಣೆ ಮಾಡಿಸಿಕೊಂಡು ಪೈಲ್ಸ್ ಮುಕ್ತರಾಗಿ ಬಾಳಿ ಎಂದು ಹೇಳಿದರು.