Live Stream

[ytplayer id=’22727′]

| Latest Version 8.0.1 |

Shivamogga

14-7-2025ರ ಸೋಮವಾರದಂದು ಲೋಕಾರ್ಪಣೆಗೊಳ್ಳಲಿರುವ ಸಿಗಂದೂರಿನ ಪ್ರತಿಷ್ಠಿತ ಕೇಬಲ್ ಸೇತುವೆ

14-7-2025ರ ಸೋಮವಾರದಂದು ಲೋಕಾರ್ಪಣೆಗೊಳ್ಳಲಿರುವ ಸಿಗಂದೂರಿನ ಪ್ರತಿಷ್ಠಿತ ಕೇಬಲ್ ಸೇತುವೆ

ಬೆಂಗಳೂರು,ಜು.13; ರಾಜ್ಯದ ಅತಿದೊಡ್ಡ ಕೇಬಲ್ ಸೇತುವೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಸಿಗಂಧೂರು ಕೇಬಲ್ ಸೇತುವೆಯನ್ನು ನಾಳೆ ಲೋಕಾರ್ಪಣೆಗೊಳಿಸಲಾಗುತ್ತಿದೆ.

ಸುಮಾರು 423 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ದೇಶದಲ್ಲಿ 2ನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆಯಾದ ಅಂಬಾರಗೋಡ್ಲು- ಕಳಸವಳ್ಳಿ- ಸಿಗಂಧೂರು ಸಂಪರ್ಕ ಸೇತುವೆಯನ್ನು ನಿರ್ಮಿಸಲಾಗಿದೆ.

ಈ ಸೇತುವೆಯನ್ನು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆಗೊಳಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ , ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿ ಪಕ್ಷ ಆರ್. ಅಶೋಕ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಶರಾವತಿ ಹಿನ್ನೀರು ಪ್ರದೇಶದಲ್ಲಿರುವ ಸಿಗಂಧೂರು ಚೌಡೇಶ್ವರಿ ದೇವಾಲಯಕ್ಕೆ ತೆರಳುವ ಭಕ್ತರು ಈ ಮೊದಲು ಶರಾವತಿ ಹಿನ್ನೀರಿನಲ್ಲಿ ಬಾರ್ಜ್ ನಲ್ಲಿ ಪ್ರಯಾಣಿಸಬೇಕಿತ್ತು. ಇದೀಗ ಸೇತುವೆ ನಿರ್ಮಾಣದಿಂದ ಭಕ್ತರಿಗೆ ಹಾಗೂ ಅಂಬಾರಗೋಡ್ಲು- ಕಳಸವಳ್ಳಿ ಪ್ರದೇಶಗಳ ಜನರಿಗೆ ಅನುಕೂಲವಾಗಲಿದೆ. ಈ ಸೇತುವೆ ನಿರ್ಮಾಣದಿಂದ ಈ ಪ್ರದೇಶದ ಜನರ ಆರು ದಶಕಗಳ ಕನಸು ನನಸಾದಂತಾಗಿದೆ.

ಶರಾವತಿ ನದಿಯ ಹಿನ್ನೀರಿನ ಮೇಲೆ ನಿರ್ಮಾಣವಾಗಿರುವುದರಿಂದ, ಸ್ಥಳೀಯರಿಗೆ ಸಂಪರ್ಕದ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ್ದಾಗಿದೆ. ಆರ್ಥಿಕತೆ ದೃಷ್ಟಿಯಿಂದ ಹಲವಾರು ಜನರಿಗೆ ಇದರಿಂದ ಪ್ರಯೋಜನವಾಗಲಿದೆ. ಈ ಸೇತುವೆ ಸಾಗರ ತಾಲೂಕಿನ ಜನರಿಗೆ ಪಕ್ಕದ ಊರುಗಳಿಗೆ ತೆರಳಲು ಸುಗಮ ಸಂಪರ್ಕ ಸೇತುವೆಯಾಗಿ ಸೇವೆಗೆ ಒದಗಲಿದೆ.
2019ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 450 ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿಗೆ ಚಾಲನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸೇತುವೆ ದೇಶದಲ್ಲೇ ಎರಡನೇ ಅತಿದೊಡ್ಡ ಕೇಬಲ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2.24 ಕಿಲೋಮೀಟರ್ ಉದ್ದ ಮತ್ತು 16 ಮೀಟರ್ ಅಗಲವಿರುವ ಈ ಸೇತುವೆ 740 ಮೀಟರ್ ಕೇಬಲ್‍ಗಳ ಆಧಾರದ ಮೇಲೆ ನಿರ್ಮಾಣಗೊಂಡಿದೆ.
ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸಂಪರ್ಕ ಕಲ್ಪಿಸಲಿರುವ ಈ ಸೇತುವೆ, ಸ್ಥಳೀಯರಿಗೆ ಹಲವಾರು ರೀತಿಯ ಸೌಕರ್ಯವಾಗಲಿದೆ.
ಸೇತುವೆಯ ಉದ್ದ: 2,125 ಮೀಟರ್ (2.1 ಕಿಲೋಮೀಟರ್), ಅಗಲ: 16 ಮೀಟರ್, ಕೇಬಲ್ ಎತ್ತರ: 38.5 ಮೀಟರ್, ಪಾದಚಾರಿ ಮಾರ್ಗ: 2 X 1.5 ಮೀಟರ್ , ಸಂಪರ್ಕ ರಸ್ತೆ: 1.05 ಕಿಮೀ ರಿಂದ 3 ಕಿಮೀ ವರೆಗೆ ಇರುತ್ತದೆ., ಸೇತುವೆಯ ತಳಪಾಯ: 164 ಫೈಲ್ ಗಳು (ಭದ್ರವಾದ ನಿರ್ಮಾಣ) ಹಾಗೂ ಉಕ್ಕಿನ ಕೇಬಲ್ ಉದ್ದ: 470 ಮೀಟರ್

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";