Live Stream

[ytplayer id=’22727′]

| Latest Version 8.0.1 |

Bengaluru Urban

ವೈಚಾರಿಕ ಸಾಹಿತ್ಯಕ್ಕೆ ಕನ್ನಡದಲ್ಲಿ ಮಾನ್ಯತೆ ಸಿಗುತ್ತಿರುವುದು ಆರೋಗ್ಯಕರ ಬೆಳವಣಿಗೆ ಕಾಸರವಳ್ಳಿ

ವೈಚಾರಿಕ ಸಾಹಿತ್ಯಕ್ಕೆ ಕನ್ನಡದಲ್ಲಿ ಮಾನ್ಯತೆ ಸಿಗುತ್ತಿರುವುದು ಆರೋಗ್ಯಕರ ಬೆಳವಣಿಗೆ ಕಾಸರವಳ್ಳಿ
ಕನ್ನಡ ಪುಸ್ತಕ  ಓದುವವರು ಇಲ್ಲ ಅನ್ನುತ್ತಿರುವ ಮಾತುಗಳು ಕೇಳಿಬರುತ್ತಿರುವಾಗಲೇ ಪ್ರಕಾಶಕರು ವೈವಿದ್ಯಮಯ ಪುಸ್ತಕವನ್ನು ಪ್ರಕಟಿಸುತ್ತಲೇ ಇದ್ದಾರೆ. ಇದರಿಂದ  ಒಂದು ಆರೋಗ್ಯಕರ ಬೆಳವಣಿಗೆ ಆಗಿದೆ. ಮೊದಲಿನಿಂದಲೂ ಸೃಜನಶೀಲ ಸಾಹಿತ್ಯಕ್ಕೆ ನೀಡಿದ ಮಹತ್ವ ವೈಚಾರಿಕ ಸಾಹಿತ್ಯಕ್ಕೆ ಸಿಗುತ್ತಿಲ್ಲ ಎನ್ನುವ ಸಕಾರಣವಾದ ಆರೋಪ ಕೇಳಿಬರುತ್ತಿತ್ತು. ಈಗ ಸಂತೋಷದ ಸಂಗತಿ ಎಂದರೆ ಸೃಜನೇತರ ವೈಚಾರಿಕ ಸಾಹಿತ್ಯಗಳು ಪ್ರಕಟವಾಗುತ್ತಿವೆ. ಸಾಕಷ್ಟು ಮಾನ್ಯತೆ ಸಿಗುತ್ತಿದೆ ಎಂದು ಕೃತಿಗಳನ್ನು ಲೋಕಾರ್ಪಣೆ ಮಾಡಿದ ಅಂತರರಾಷ್ಟ್ರಿಯ ಖ್ಯಾತಿಯ ಚಿತ್ರನಿರ್ದೇಶಕ ಗಿರೀಶ್‌ ಕಾಸರವಳ್ಳಿ ತಿಳಿಸಿದರು.
ಇಂದು ಲೋಕಾರ್ಪಣೆಗೊಂಡಿರುವ ಪುಸ್ತಕಗಳು ಹಳತು ಹೊಸತು ಎರಡು ತಲೆಮಾರಿನವರು ಇವೆ. ಇಂದು ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಬಾನುಮುಷ್ತಾಕ್‌ ಅವರಿಂದ ಮಾನ್ಯತೆ ದೊರೆತಿರುವುದು ಸಂತೋಷ, ಇಂತಹ ಸಂತೋಷ ಕನ್ನಡಕ್ಕೆ ನಿರಂತವಾಗಿರಲು ಇನ್ನಷ್ಟು ಕನ್ನಡದ ಮಹತ್ವದ ಕೃತಿಗಳು ಇಂಗ್ಲಿಷ್‌ಗೆ ಅನುವಾದ ಆಗಬೇಕೆಂದು ಕಾಸರವಳ್ಳಿ ಅಭಿಪ್ರಾಯ ಪಟ್ಟರು
ಮುಖ್ಯ ಅತಿಥಿಯಾಗಿದ್ದ ಶ್ರೀ ಜೋಗಿಯವರು  ಎಲ್ಲಾ ಪುಸ್ತಕಗಳನ್ನು ಪರಿಚಯಿಸಿ ಇಂದು ಬಿಡುಗಡೆಯಾದ 15 ಪುಸ್ತಕಗಳು ವಿಭಿನ್ನ ಪುಸ್ತಕಗಳು ಪ್ರಕಟವಾಗಿರುವುದು ಒಳ್ಳೇಯ ಬೆಳವಣಿಗೆ.  ಪುಸ್ತಕಗಳ ಬೆಳವಣಿಗೆ ಹುಲುಸಾಗಿದೆ ಆದರೆ ಓದುಗರು ಒಂದು ವಯೋಮಾನಕ್ಕೆ ನಿಂತಿದೆ. ಈಗ ಲೇಖಕರ ಜವಾಬ್ದಾರಿ ಹೆಚ್ಚಿದ್ದು. ಓದುಗರ ನಿರಂತರ ಸಂಪರ್ಕ ಬೆಳೆಸುವುದು ಮಾತನಾಡುವುದು ಕಾಣಿಸಿಕೊಳ್ಳುವುದು ಮುಖ್ಯವಾಗಿದ್ದು ಜೊತೆಗೆ ಇಂದಿನ ಕಾಲಮಾನಕ್ಕೆ ಪ್ರಸ್ತತವಾಗಿರುವ ಹೊಸ ಸಾಮಾಜಿಕ ಮಾಧ್ಯಮಗಳಿಗೆ ತೆರೆದುಕೊಳ್ಳಬೇಕೆಂದರು.
ಸಮಾರಂಭದಲ್ಲಿ ಡಾ. ಡಿ. ವಿ. ಗುರುಪ್ರಸಾದ್‌, ಡುಂಡಿರಾಜ್‌, ನಾಗತಿಹಳ್ಳಿ ಜಯಪ್ರಕಾಶ್‌ ತಮ್ಮ ಕೃತಿಗಳ ಕುರಿತು ಮಾತನಾಡಿದರು. ಎಂ. ಕೆ. ಇಂದಿರಾ ಅವರ ಪುತ್ರ ಮಂಜುನಾಥ್‌ ಸಭೆಯಲ್ಲಿ ಹಾಜರಿದ್ದರು.
ಸಮಾರಂಭದಲ್ಲಿ ಸಪ್ನ ಬುಕ್‌ ಹೌಸ್‌ ನಿತಿನ್‌ ಷಾ ಸ್ವಾಗತಿಸಿದರು. ಆರ್.‌ ದೊಡ್ಡೆಗೌಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯಸಾಹಿತಿಗಳು ಉಪಸ್ಥಿತರಿದ್ದರು.
VK NEWS DIGITAL :

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";